HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ ಕಿರಣ್ ರಾಜ್ ನಟನೆಯ 'ರಾನಿ'

ಸಿನಿ ಪ್ರೇಕ್ಷಕರ ಗಮನ ಸೆಳೆದ ಕಿರಣ್ ರಾಜ್ ನಟನೆಯ ‘ರಾನಿ’

ಕಿರಣ್ ರಾಜ್ ಅಭಿನಯದ ಗುರುತೇಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ರಾನಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕ ಪ್ರಭುಗಳಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಆಕ್ಷನ್ ಥ್ರಿಲ್ಲರ್ ಜೊತೆಗೆ  ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಇದಾಗಿದ್ದು, ಕುಟುಂಬ ಸಮೇತ  ನೋಡಬಹುದಾಗಿದೆ.

ಈ ಚಿತ್ರವನ್ನು ಸ್ಟಾರ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಸೇರಿದಂತೆ ಸಮೀಕ್ಷಾ, ಅಪೂರ್ವ, ರಾಧ್ಯಾ, ರವಿಶಂಕರ್, ಬಿ ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ , ಧರ್ಮಣ್ಣ, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಕರಿ ಸುಬ್ಬು, ಮೈಕೋ ನಾಗರಾಜ್, ಪೃಥ್ವಿ, ಅರ್ಜುನ್ ಪಾಳೇಗಾರ್,. ಬಣ್ಣ ಹಚ್ಚಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ  ನೀಡಿದ್ದು, ಉಮೇಶ್ ಆರ್.ಬಿ ಸಂಕಲನ, ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular