HomeLatest NewsBREAKING: ದೆವ್ವ ಬಿಡಿಸುವುದಾಗಿ ಕರೆದೊಯ್ದು ಮಹಿಳೆಯನ್ನೇ ಹೊಡೆದು ಕೊಂದ ಕಿರಾತಕರು

BREAKING: ದೆವ್ವ ಬಿಡಿಸುವುದಾಗಿ ಕರೆದೊಯ್ದು ಮಹಿಳೆಯನ್ನೇ ಹೊಡೆದು ಕೊಂದ ಕಿರಾತಕರು

ಕಲಬುರಗಿ: ದೆವ್ವ ಮೆಟ್ಟಿಕೊಂಡಿದೆ, ಅದನ್ನು ಬಿಡಿಸುವುದಾಗಿ ಹೇಳಿ ಕರೆದೊಯ್ದು ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಕಲಬುರಗ್ ಮೂಲದ ಮಹಿಳೆಯನ್ನು ಮಹಾರಾಷ್ಟ್ರದಲ್ಲಿ ಸಂಬಂಧಿಕರೇ ಹೊಡೆದು ಕೊಲೆ ಮಾಡಿದ್ದಾರೆ.

ಮುಕ್ತಾಬಾಯಿ (34) ಕೊಲೆಯಾದ ಮಹಿಳೆ. ಕಲಬುರಗಿಯ ಆಳಂದ ಮೂಲದ ಮುಕ್ತಾಭಾಯಿಯನ್ನು ಗಿಡ್ಡೆಪ್ಪ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಎರಡು ದಿನಗಳ ಹಿಂದೆ ಮುಕ್ತಾಬಾಯಿ ಮನೆಯಂಗಳದಲ್ಲಿ ಇದ್ದಕ್ಕಿದ್ದಂತೆ ತಲೆಸುತ್ತಿಬಂದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಬದಲು ಗಿಡ್ಡೆಪ್ಪ ಸಹೋದರ ಸಂಬಂಧಿ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಬೇವಿನ ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ.

ಅಲ್ಲದೇ ಮಹಾರಾಷ್ಟ್ರ ಮುರುಮ್ ಗ್ರಾಮಕ್ಕೆ ಮುಕ್ತಾಬಾಯಿಯನ್ನು ದೆವ್ವ ಬಿಡಿಸುವುದಾಗಿ ಹೇಳಿ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ದೊಣ್ಣೆಯಿಂದ ಮನಬಂದಂತೆ ಹೊಡೆಯಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಬಳಿಕ ಕಲಬುರಗಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಮೇಲೆ ಹೊಡೆದ ಗಾಯಗಳಿದ್ದು, ದೊಣ್ಣೆಯಿಂದ ಹೊಡೆಯಲಾಗಿದೆ ಎಂದು ವೈದ್ಯರು ಮುಕ್ತಾಭಾಯಿ ಕಡೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಚಿಕಿತ್ಸೆ ವೇಳೆಯೇ ಮುಕ್ತಾಭಾಯಿ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮುಕ್ತಾಭಾಯಿ ಪತಿ ಗಿಡ್ಡೆಪ್ಪ ಸೋದರ ಸಂಬಂಧಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular