HomeLatest NewsBREAKING: ತೆಲಂಗಾಣ ರಾಷ್ಟ್ರ ಸೇನಾ ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಿಎಂ ಕೆಸಿಆರ್...

BREAKING: ತೆಲಂಗಾಣ ರಾಷ್ಟ್ರ ಸೇನಾ ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ತಮ್ಮದೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಈ ಮೂಲಕ ತಂದೆ ಕೆ ಸಿಆರ್ ಹಾಗೂ ಸಹೋದರನಿಗೆ ಸೆಡ್ಡುಹೊಡೆದಿದ್ದಾರೆ.

ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಮುನಿರಾಆದ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೆ.ಕವಿತಾ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್ ಎಸ್) ಪಕ್ಷ ಘೋಷಿಸಿದ್ದಾರೆ. ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಾವಿರ ಜನರನ್ನು ಸೇರಿಸಿ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

ಮಾಜಿ ಎಂಎಲ್ ಸಿ ಆಗಿರುವ ಕೆ.ಕವಿತಾ ಸದ್ಯ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆಯಾಗಿದ್ದಾರೆ. ನೂತನ ಪಕ್ಷ ಸ್ಥಾಪಿಸುವ ಮೂಲಕ ಕವಿ, ತಂದೆ ಕೆ ಸಿಆರ್ ಹಾಗೂ ಸಹೋದರ ಕೆ.ಟಿ.ರಾಮರಾವ್ ಅವರಿಗೆ ಸೆಡ್ಡುಹೊಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆ.ಕವಿತಾ ದೆಹಲಿಯ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಜೈಲು ಸೇರಿದ್ದರು. ಬಳಿಕ ಅಬಕಾರಿ ನೀತಿ ಕೇಸ್ ನಲ್ಲಿ ಕ್ಲೀನ್ ಚಿಟ್ ಪಡೆದು ಬಿಡುಗಡೆಯಾಗಿ ಬಂದಿದ್ದರು. ಪಕ್ಷದ ವಿಚಾರವಾಗಿ ತಂದೆ ಹಾಗೂ ಸಹೋದರನ ನಡುವೆ ಕಲಹ ಉಂಟಾಗಿತ್ತು. ಈ ಕಲಹದಿಂದ ಬೇಸತ್ತು ಕವಿತಾ ಬಿಆರ್ ಎಸ್ ಪಕ್ಷದಿಂದ ಹೊರ ಬಂದಿದ್ದರು. ಬಳಿಕ ತನ್ನದೇ ಹೊಸ ಪಕ್ಷ ರಚಿಸಲು ತೀರ್ಮಾನಿಸಿದ್ದರು. ಅದರಂತೆ ಇಂದು ತೆಲಂಗಾಣ ರಾಷ್ಟ್ರೀಯ ಸೇನಾ ಎಂಬ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular