HomeIPL 2026ಧೋನಿ, ರೋಹಿತ್ ರೀತಿ ರಿಷಭ್ ಪಂತ್ 5 ಕಪ್ ಗೆಲ್ತಾರೆ ಎಂದ ಗೊಯೆಂಕಾ: ಮೊದಲು ಪಂದ್ಯ...

ಧೋನಿ, ರೋಹಿತ್ ರೀತಿ ರಿಷಭ್ ಪಂತ್ 5 ಕಪ್ ಗೆಲ್ತಾರೆ ಎಂದ ಗೊಯೆಂಕಾ: ಮೊದಲು ಪಂದ್ಯ ಗೆಲ್ಲಲು ಹೇಳಿ ಎಂದು ಕಾಲೆಳೆದ ನೆಟ್ಟಿಗರು; ವಿಡಿಯೊ

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರ ಟೂರ್ನಿಯ ಲೀಗ್ ಹಂತ ಅರ್ಧಭಾಗ ಮುಗಿಯುವ ಸಮೀಪದಲ್ಲಿದೆ. ಈ ಹಂತದವರೆಗೆ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉತ್ತಮ ಹಂತದಲ್ಲಿವೆ. ಆರಂಭದಿಂದಲೇ ಸಾಲು ಸಾಲು ಪಂದ್ಯಗಳಲ್ಲಿ ಗೆಲುವು ಕಂಡ ಈ ತಂಡಗಳು ಅಂಕಪಟ್ಟಿಯಲ್ಲಿ ಟಾಪ್‌ನಲ್ಲಿವೆ.

ಇನ್ನು ಆರಂಭದಲ್ಲಿ ಸಾಧಾರಣ ಎನ್ನುವ ಆರಂಭ ಪಡೆದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಸದ್ಯ ಚೇತರಿಸಿಕೊಂಡಿದ್ದು, ಟಾಪ್ 4 ರೇಸ್‌ಗೆ ಇಳಿದಿದೆ. ಇವುಗಳ ಜತೆ ಡೆಲ್ಲಿ ಕ್ಯಾಪಿಟಲ್ಸ್ ಸಹ ಪೈಪೋಟಿ ನೀಡುವ ಹಾಗೆ ಕಾಣುತ್ತಿದ್ದು, ಮುಂಬೈ ಇಂಡಿಯನ್ಸ್ ಸಹ ಒಂದು ಗೆಲುವಿನಿಂದ ಅಂಕಪಟ್ಟಿಯಲ್ಲಿ ಭಾರೀ ಏರಿಕೆ ಕಂಡು ವಿಶ್ವಾಸದಲ್ಲಿದೆ.

ಹೀಗೆ ಈ ತಂಡಗಳು ಭರವಸೆ ಮೂಡಿಸಿದ್ದರೆ ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಾತ್ರ ಲೀಗ್ ಹಂತದ ಅರ್ಧ ಭಾಗ ಮುಗಿಯುತ್ತಿದ್ದರೂ ಇನ್ನೂ ಪುಟಿದೇಳುವ ಹಾಗೆ ಕಾಣುತ್ತಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆ ( ಏಪ್ರಿಲ್ 22 ) ನಡೆದ ಟೂರ್ನಿಯ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತನ್ನದೇ ಹೋಮ್ ಪಿಚ್‌ನಲ್ಲಿ ರಾಜಸ್ಥಾನ್ ನೀಡಿದ್ದ 160 ರನ್ ಚೇಸ್ ಮಾಡಲಾಗದೇ 40 ರನ್‌ಗಳ ಹೀನಾಯ ಸೋಲನ್ನು ಕಂಡು ಟೂರ್ನಿಯಲ್ಲಿ ಐದನೇ ಪಂದ್ದದಲ್ಲಿ ಪರಾಭವಗೊಂಡು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ಯಾವ ತಂಡಕ್ಕೂ ಪೈಪೋಟಿ ಕೊಡದೇ ಟೊಳ್ಳು ತಂಡವಾಗಿ ಕಳೆದ ಆವೃತ್ತಿಯ ರೀತಿಯೇ ಕಾಣಿಸುತ್ತಿದ್ದು, ಟೀಕೆಗಳಿಗೆ ಒಳಗಾಗಿದೆ. ಈ ತಂಡ ಟೂರ್ನಿಯಲ್ಲಿ ಇದ್ದರೂ, ಇರದಿದ್ದರೂ ಒಂದೇ, ಇತರ ತಂಡಗಳಿಗೆ ಈ ತಂಡದ ಕುರಿತು ಭಯವಿಲ್ಲ ಎಂದು ಕಾಲೆಳೆದಿದ್ದಾರೆ.

ಅಲ್ಲದೇ ಇದೇ ಸಮಯದಲ್ಲಿ ಟೂರ್ನಿ ಆರಂಭಕ್ಕೂ ಮುನ್ನ ಲಕ್ನೋ ತಂಡದ ಮಾಲೀಕ ಸಂಜೀವ್ ಗೊಯೆಂಕಾ ರಿಷಬ್ ಪಂತ್ ಕುರಿತು ನೀಡಿದ್ದ ಅತಿಯಾದ ವಿಶ್ವಾಸದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗೊಯೆಂಕಾ ನಗೆಪಾಟಲಿಗೀಡಾಗಿದ್ದಾರೆ.

ಈ ವಿಡಿಯೊದಲ್ಲಿ ಗೊಯೆಂಕಾ ಹಾಗೂ ರಿಷಬ್ ಪಂತ್ ಸಂದರ್ಶನ ನೀಡುತ್ತಿದ್ದು, ಗೊಯೆಂಕಾ ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ ಹೆಚ್ಚು ಕಪ್ ಗೆದ್ದಿದ್ದಾರೆ, ಅದೇ ರೀತಿ ರಿಷಬ್ ಪಂತ್ ಸಹ ಲಕ್ನೋ ಪರ 15 ವರ್ಷಗಳ ಕಾಲ ಆಡಲಿದ್ದು, ಐದರಿಂದ ಆರು ಕಪ್ ಗೆದ್ದು ಅವರ ಸಾಲಿಗೆ ಸೇರಲಿದ್ದಾರೆ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದರು.

ಅವರ ಈ ಹೇಳಿಕೆಯನ್ನು ಈಗ ನೆನಪಿಸುತ್ತಿರುವ ನೆಟ್ಟಿಗರು ಐದರಿಂದ ಆರು ಕಪ್ ಗೆಲ್ಲುವುದಿರಲಿ, ಮೊದಲು ಆತನಿಗೆ ಪಂದ್ಯಗಳನ್ನು ಗೆಲ್ಲಿಸಲು ಹೇಳಿ ಎಂದು ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular