HomeUncategorizedರಾಹುಲ್ ಗಾಂಧಿ ರೋಲ್ ಮಾಡೆಲ್ ಎಂದಿದ್ದಕ್ಕೆ ₹40 ಲಕ್ಷ ಸಂಬಳದ ಯುವಕನ ಮದುವೆ ಪ್ರಸ್ತಾಪ ನಿರಾಕರಿಸಿದ...

ರಾಹುಲ್ ಗಾಂಧಿ ರೋಲ್ ಮಾಡೆಲ್ ಎಂದಿದ್ದಕ್ಕೆ ₹40 ಲಕ್ಷ ಸಂಬಳದ ಯುವಕನ ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿ

ಸಾಮಾನ್ಯವಾಗಿ ಮದುವೆ ಮಾತುಕತೆ ವೇಳೆ ವರನ ಕೆಲಸ, ಆತನ ವಾರ್ಷಿಕ ಆದಾಯ, ಸ್ವಭಾವ ಹಾಗೂ ಕುಟುಂಬದ ಹಿನ್ನೆಲೆಯನ್ನು ನೋಡುವುದು ವಾಡಿಕೆ. ಆದರೆ, ಸುಂದರವಾಗಿದ್ದು, ವರ್ಷಕ್ಕೆ ಬರೋಬ್ಬರಿ ₹40 ಲಕ್ಷ ಸಂಪಾದಿಸುವ ಉತ್ತಮ ಕುಟುಂಬದ ಯುವಕನೊಬ್ಬನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು ವಿಚಿತ್ರ ಕಾರಣಕ್ಕೆ ತಿರಸ್ಕರಿಸಿರುವ ಘಟನೆ ಈಗ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಭಾರಿ ಚರ್ಚೆಗೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ನಿರ್ಧಾರ

ಆರೂಹಿ ರೆಡ್ಡಿ ಎಂಬ ಹೆಸರಿನ ಎಕ್ಸ್ ಖಾತೆದಾರರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೆ ಇತ್ತೀಚೆಗೆ ಮದುವೆಯ ಪ್ರಸ್ತಾಪವೊಂದು ಬಂದಿತ್ತು. ಆ ಹುಡುಗ ನೋಡಲು ಹ್ಯಾಂಡ್‌ಸಮ್ ಆಗಿದ್ದ, ₹40 ಲಕ್ಷದ ಉತ್ತಮ ಪ್ಯಾಕೇಜ್ ಹೊಂದಿದ್ದು, ಒಳ್ಳೆ ಕುಟುಂಬದಿಂದ ಬಂದವನಾಗಿದ್ದ. ಆದರೂ ನಾನು ಆತನನ್ನು ನಿರಾಕರಿಸಿದೆ. ಕಾರಣ, ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ತೆರೆದು ನೋಡಿದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತನ್ನ ರೋಲ್ ಮಾಡೆಲ್ ಎಂದು ಬರೆದುಕೊಂಡಿದ್ದ ಎಂದು ಪೋಸ್ಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://x.com/CuteAaruhi4/status/2089313204531020023

https://www.instagram.com/reel/DcQXb35T2xZ/?utm_source=ig_web_copy_link&igsi=NTc4MTIwNjQ2YQ==

ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ ಆಕೆ, “ನಾನೊಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ. ಸದಾ ಸೋಲುವ ವ್ಯಕ್ತಿಯನ್ನು ತನ್ನ ಆದರ್ಶ ಎಂದು ನಂಬಿರುವವನನ್ನು ನಾನು ಹೇಗೆ ತಾನೇ ಜೀವನಸಂಗಾತಿಯಾಗಿ ಸ್ವೀಕರಿಸಲಿ? ನನಗೆ ಹಣ ಮತ್ತು ಆಸ್ತಿಗಿಂತ ನನ್ನ ದೇಶವೇ ಮುಖ್ಯ” ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತನಗೆ ಕಳೆದ ತಿಂಗಳಷ್ಟೇ 18 ವರ್ಷ ತುಂಬಿದೆ ಎಂಬುದನ್ನೂ ಕಾಮೆಂಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಕ್ಸ್‌ನಲ್ಲಿ ನೆಟ್ಟಿಗರ ನಡುವೆ ಪರ-ವಿರೋಧ ಚರ್ಚೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದು, ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ:

ಬೆಂಬಲ: “ಜೀವನಪೂರ್ತಿ ಒಟ್ಟಿಗೆ ಬಾಳಬೇಕಾದಾಗ ಸಿದ್ಧಾಂತ ಹಾಗೂ ಆಲೋಚನೆಗಳು ಹೊಂದುವುದು ಅತ್ಯಗತ್ಯ. ಆಕೆಯ ವೈಯಕ್ತಿಕ ನಿಲುವು ಸರಿಯಾಗಿದೆ” ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಟೀಕೆ: “ರಾಜಕೀಯ ಅಭಿಪ್ರಾಯಗಳನ್ನು ಮದುವೆಯಂತಹ ಪವಿತ್ರ ಬಂಧಕ್ಕೆ ತರುವುದು ಸರಿಯಲ್ಲ. ಕೇವಲ ರಾಜಕೀಯ ಸಿದ್ಧಾಂತದಿಂದ ವ್ಯಕ್ತಿಯ ಗುಣವನ್ನು ಅಳೆಯಲು ಸಾಧ್ಯವಿಲ್ಲ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular