HomeKarnatakaಅಸಹಾಯಕರ ಮೇಲೆ ಪೌರುಷ ತೋರಿಸುವ ಬದಲು, ನನ್ನೊಂದಿಗೆ ಪೌರುಷ ತೋರಿಸಿ: ಇನ್ಸ್ ಪೆಕ್ಟರ್ ಧನಂಜಯ್ ಗೆ...

ಅಸಹಾಯಕರ ಮೇಲೆ ಪೌರುಷ ತೋರಿಸುವ ಬದಲು, ನನ್ನೊಂದಿಗೆ ಪೌರುಷ ತೋರಿಸಿ: ಇನ್ಸ್ ಪೆಕ್ಟರ್ ಧನಂಜಯ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು

ಮೈಸೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಸೀದಿಗಳ ಮುಂದೆ ಗಣೇಶ ಮೂರ್ತಿ ಮೆರವಣಿಗೆ ನಡೆಸದಂತೆ ಟಿ.ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಎಚ್ಚರಿಕೆ ಮತ್ತು ನಿರ್ಬಂಧಗಳ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮತ್ತು ಟಿ. ನರಸೀಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಧನಂಜಯ್ ಹೇಳಿದ್ದಾರೆ. ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು. ಬೇರೆ ರಸ್ತೆಗಳ ಮೂಲ ಹೋಗಬೇಕು. ನಾವು ಯಾವ ರಸ್ತೆ ಮಾರ್ಗಗಳನ್ನು ಸೂಚಿಸುತ್ತೇವೆಯೋ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗಬೇಕು ಎಂದು ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಗತ್ಯವಾಗಿ ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು, ಮಸೀದಿಗಳ ಮುಂದೆ ಹೋಗಿ ಮೆರವಣಿಗೆ ನಿಲ್ಲಿಸಿ, ಕುಣಿಯುವುದು, ಗಲಭೆ ಸೃಷ್ಟಿಸುವುದು ಕಂಡುಬಂದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ನಮ್ಮ ಹಬ್ಬವನ್ನು ನೋಡಿ ಬೇರೆಯವರು ಗೌರವ ಕೊಡಬೇಕು. ಯಾವ ಧರ್ಮವಾದರೇನು? ಅವರಧರ್ಮ ಅವರಿಗೆ ಹೆಚ್ಚು. ಗಣೇಶ ಹಬ್ಬದಂದು ಮಸೀದಿ ಮುಂದೆ ಹೋಗಿ ಕುಣಿಯಬೇಕೆಂದು ಎಲ್ಲಿಯೂ ಹೇಳಿಲ್ಲ. ನಮ್ಮ ಹಬ್ಬದ ಆಚರಣೆ ನೋಡಿ ಇತರು ಗೌರವಿಸಲಿ ಎಂದು ಹೇಳಿಕೆ ನೀಡಿದ್ದರು.

ಲಿಂಕ್ ರಸ್ತೆಯಲ್ಲಿರುವ ಮಸೀದಿ ಬಳಿ ಗಣೇಶ ಮೆರವಣಿಗೆ ಸಾಗದಂತೆ ಷರತ್ತು ವಿಧಿಸಿದ್ದು, ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಧನಂಜಯ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ನನ್ನ ಗಮನಕ್ಕೆ ಬಂದರೆ ಹೇಳಲ್ಲ, ಮಾಡಿ ತೋರಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದರು.

ಮೆರವಣಿಗೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದ ಯುವಕರನ್ನು ಪೊಲೀಸ್ ಠಾಣೆಗೆ ಕರೆಸಿ, ನಿಯಮಗಳನ್ನು ಪಾಲಿಸುವಂತೆ ಎಚ್ಚರಿಸುವ ಸಂದರ್ಭದಲ್ಲಿ, ಮಸೀದಿ ಮುಂದೆ ಮೆರವಣಿಗೆ ಸಾಗದಂತೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದರು.ಇನ್ಸ್ ಪೆಕ್ಟರ್ ಧನಂಜಯ್ ಅವರ ಖಡಕ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಇನ್ಸ್ ಪೆಕ್ಟರ್ ಧನಂಜಯ್ ಹೇಳಿಕೆ ಭಾರಿ ಚರ್ಚೆಗೂ ಕಾರಣವಾಗಿತ್ತು. ಧನಂಜಯ್ ಅವರಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “ಇನ್ನೊಂದು ಸಾರಿ ಅಂತಹ ಮಾತು ನಿಮ್ಮ ಬಾಯಿಂದ ಬಂದರೆ, ನಿಮ್ಮ ಠಾಣೆಗೆ ಬಂದು ನುಗ್ಗುತ್ತೇನೆ” ಎಂದು ಎಚ್ಚರಿಸಿದ್ದಾರೆ.

ಅಸಹಾಯಕ ಯುವಕರ ಮೇಲೆ ಪೌರುಷ ತೋರಿಸುವ ಬದಲು, ನಾನು ಬಂದಾಅಗ ನನ್ನೊಂದಿಗೆ ಪೌರುಷ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಮಾತ್ರ ಮಸೀದಿಗಳ ಮುಂದೆ ಪೊಲೀಸ್ ಭದ್ರತೆ ಇರುತ್ತದೆ, ಆದರೆ ಮೊಹರಂ ಅಥವಾ ಈದ್ ಮೆರವಣಿಗೆಗಳ ಸಂದರ್ಭದಲ್ಲಿ ದೇವಸ್ಥಾನಗಳ ಮುಂದೆ ಇದೇ ರೀತಿಯ ಭದ್ರತೆ ಯಾಕೆ ಇರುವುದಿಲ್ಲ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಈ ನಿರ್ಬಂಧಗಳು ಏಕಪಕ್ಷೀಯವಾಗಿವೆ. ಇನ್ಸ್ ಪೆಕ್ಟರ್ ಧನಂಜಯ್ ಅವರ ಹೇಳಿಕೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular