ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ರಾಮಫೋಸಾ ಸೇರಿದಂತೆ ಹಲವು ರಾಷ್ಟ್ರಗಳ ಗಣ್ಯಾತಿಗಣ್ಯರು ಭಾಗವಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬ್ರಿಕ್ಸ್ ಒಕ್ಕೂಟದ ಮುಂದೆ 10 ಪ್ರತಾಪಗಳನ್ನು ಮಂಡಿಸಿದರು. ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲರನ್ನೂ ಒಗ್ಗಟ್ಟಾಗಿ ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು. ಈ ವರ್ಷದ ಬ್ರಿಕ್ಸ್ ಶೃಂಗಸಭೆ ಐತಿಹಾಸಿಕ ಮೈಲುಗಲ್ಲು ಹಾಗೂ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ಬ್ರಿಕ್ಸ್ ಒಕ್ಕೂಟ ಯಾವುದೇ ದೇಶದ ವಿರುದ್ಧವಿಲ್ಲ. ಬ್ರಿಕ್ಸ್ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸ್ಥಿತಿಸ್ಥಾಪಕತ್ವವಾಗಿದೆ. ನಾವೀನ್ಯತೆ, ಸಹಕಾರ, ಸುಸ್ಥಿರತೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಭಾರತದ ಅಧ್ಯಕ್ಷತೆಯಲ್ಲಿ 350ಕ್ಕೂ ಹೆಚ್ಚು ಸಭೆಗಳನ್ನು ಆಯೋಜನೆ ಮಾಡಲಾಗುವುದು. ದೇಶದ 30 ನಗರಗಳಲ್ಲಿ ವಿವಿಧ ಬ್ರಿಕ್ಸ್ ಕಾರ್ಯಕ್ರಮ ಆಯೋಜಿಸಲಾಗುವುದು. ಭಾರತದ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡಿದ್ದಕ್ಕೆ ಧ್ಯನ್ಯವಾದಗಳು ಎಂದರು.
ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲಿ ಈ ಬ್ರಿಕ್ಸ್ ಶೃಂಗಸಭೆಗೆ ವಿಶೇಷ ಮಹತ್ವವಿದೆ. 20ನೇ ವಯಸ್ಸು ಮಾನವನ ಜೀವನದಲ್ಲಿ ಪರಿಪಕ್ವತೆ, ಜವಾಬ್ದಾರಿಯ ಹೊಸ ಹಂತವನ್ನು ತಲುಪತ್ತದೆ. ಅದೇ ರೀತಿ ಬ್ರಿಕ್ಸ್ ಕೂಡ ಈಗ ಪ್ರೌಢಾವಸ್ಥೆ ಹಂತಕ್ಕೆ ಪ್ರವೇಶಿಸಿದೆ. ಈಗ ಬ್ರಿಕ್ಸ್ ಜಾಗತಿಕ ವೇದಿಕೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಮುಂದಿನ ಹಂತದಲ್ಲಿ ಪರಸ್ಪರ ಗೌರವ, ಸಹಕಾರ ಮತ್ತು ಜವಾಬ್ದಾರಿಯೊಂದಿಗೆ ಬ್ರಿಕ್ಸ್ ದೇಶಗಳ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ಸಾರಿದರು.
ಸ್ಪಷ್ಟ ಫಲಿತಾಂಶವಾಗಿ ಮಾರ್ಪಡಿಸುವ ಸಮಯ ಬಂದಿದೆ. ಬ್ರಿಕ್ಸ್ ಸಂಬಂಧ ಮುಂದಿನ 20 ವರ್ಷಗಳಿಗಾಗಿ ಹೊಸ ಹಾಗು ಮಹಾಅತ್ವಾಅಕಾಂಕ್ಷೆಯ ಕಾರ್ಯಸೂಚಿ ರೂಪಿಸಲು ಪ್ರಧಾಅನಿ ಮೋದಿ ಕರೆ ನೀಡಿದರು. ಪ್ರತಿ ವರ್ಷ ಅಧ್ಯಕ್ಷತೆ ಬದಲಾದರೂ ಸಾಂಸ್ಥಿಕ ನಿರಂತರತೆ ನಿಲ್ಲಬಾರದು ಸಮಿತಿಯ ನಿರಂತರತೆ ಮತ್ತು ಅನುಷ್ಠಾನ ಕಾರ್ಯವಿಧಾನ ಸ್ಥಾಪನೆ ಅಗತ್ಯ ಟ್ರೊಯ್ಕಾ ವ್ಯವಸ್ಥೆ ಮೂಲಕ ಬ್ರಿಕ್ಸ್ ನ ಎಲ್ಲಾ ಉಪಕ್ರಮಗಳು ಫಲಿತಾಂಶಗಳ ಅನುಷ್ಠಾನದ ಮೇಲ್ವಿಚಾರಣೆ, ನಿರ್ಧಾರಗಳ ಅನುಷ್ಠಾನಕ್ಕೆ ಸುರಕ್ಷಿತ ಡಿಜಿಟಲ್ ರೆಪೊಸಿಟರಿ ನಿರ್ಮಿಸುವ ಕೆಲಸ ಆಗಬೇಕಿದೆ.
ಬ್ರಿಕ್ಸ್ ಬಲಪಡಿಸುವ ಜೊತೆಗೆ ಜಾಗತಿಕ ಆಡಳಿತದಲ್ಲಿ ಸುಧಾರಣೆ ಆಗಬೇಕು. ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆ ಪಿರಮಿಡ್ ನಂತಿದೆ. ಮೇಲ್ಭಾಗದಲ್ಲಿ ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರೀಕೃತವಾಗಿದೆ. ಕೆಳಭಾಗದಲ್ಲಿರುವ ಹಲವು ದೇಶಗಳುನಿರ್ಧಾರಗಳಿಂದ ಪ್ರಭಾವಿತವಾಗುತ್ತವೆ. ಆದರೆ ನಿರ್ಧಾರ ರೂಪಿಸುವಲ್ಲಿ ಸಮರ್ಪಕವಾಗಿ ಪಾತ್ರವಹಿಸುತ್ತಿಲ್ಲ. ಜಾಗತಿಕ ಬಿಕ್ಕಟ್ಟುಗಳ ಮುಂಚೂಣಿಯಲ್ಲಿರುವ ಗ್ಲೋಬಲ್ ಸೌತ್ ನಿರ್ಧಾರಗಳನ್ನು ಕೈಗೊಳ್ಳುವಾಗಹಿಂಬದಿಯಲ್ಲಿರುತ್ತವೆ. ಪ್ರಿವಿಲೇಜ್ ಪಿರಮಿಡ್ ಅನ್ನು ಪಾಲುದಾರಿಕೆ ವೇದಿಕೆಯಾಗಿ ಪರಿವರ್ತಿಸಬೇಕು. ಪ್ರತಿಯೊಂದು ದೇಶಕ್ಕೂ ಧ್ವನಿ, ಪ್ರತಿಯೊಬ್ಬ ಸದಸ್ಯನಿಗೂ ಸ್ಥಾನ, ಮಾನವ ಅಭಿವೃದ್ಧಿಯೇ ಎಲ್ಲಾ ಪ್ರಯತ್ನಗಳ ಕೇಂದ್ರವಾಗಬೇಕು ಎಂದು ಹೇಳಿದರು.
ಮುಂದಿನ ಬ್ರಿಕ್ಸ್ ಶೃಂಗಸಭೆಯೊಳಗೆ ಸುಧಾರಣಾ ಮಾರ್ಗಸೂಚಿ ರಚನೆ ಗುರಿ, ರೋಡ್ ಮ್ಯಾಪ್ ನಲ್ಲಿ ಪ್ರಮುಖವಾಗಿ ಪ್ರತಿಧ್ವನಿ, ಸ್ಪಂದನಾಶೀಲತೆ, ನಿಯಮ ರಚನೆ ಈ ಮೂರು ಅಂಶಗಳಿಗೆ ಒತ್ತು ನೀಡಬೇಕು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆ ಇನ್ನು ವಿಳಂಬವಾಗಬಾರದು. UNSC ಸುಧಾರಣೆಯ ಮಾತುಕತೆಗಳಿಗೆ ನಿಗದಿತ ಕಾಲಮಿತಿ ಮತ್ತು ಸ್ಪಷ್ಟ ಫಲಿತಾಂಶ ಇರಬೇಕು ಎಂದು ಪ್ರಧಾಅನಿ ಮೋದಿ ಹೇಳಿದರು.

