ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದ್ದ ಬಿಜೆಪಿ ಇದೀಗ ಮತ್ತೊಂದು ಪಾದಯಾತ್ರೆಗೆ ಮುಂದಾಗಿದೆ. ಸೆಪ್ಟೆಂಬರ್ 15ರಿಂದ ಐದು ದಿನಗಳ ಕಾಲ ಬೃಹತ್ ಪಾದಯಾತ್ರೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ವಂದೇ ಮಾತರಂ ಗೀತೆಯ ಮೊದಲ ಎರಡು ಚರಣ ಮಾತ್ರ ಹಾಡಿದರೆ ಸಾಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದನ್ನು ವಿರೋಧಿಸಿ ಬಿಜೆಪಿ ಐದು ದಿನಗಳ್ ಅಪಾದಯಾತ್ರೆಗೆ ಸಿದ್ಧತೆ ನಡೆಸಿದೆ.
ಸರ್ಕಾರದ ಈ ನಿರ್ಧಾರ ವಿರೋಧಿಸಿ ಸೆಪ್ಟೆಂಬರ್ 15ರಿಂದ ಐದು ದಿನಗಳ ಕಾಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಾದಯಾತ್ರೆ ನಡೆಯಲಿದೆ.
ಈ ಬಗ್ಗೆ ಬಿಜೆಪಿಬ್ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದು, ಸರ್ಕಾರ ವಂದೇ ಮಾತರಂ ಗೀತೆ ಮೊಟಕು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 15ರಿಂದ ಐದು ದಿನಗಳ ಕಾಲ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂದಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ಅರ್ಧ ಕಿ.ಮೀನಿಂದ ಒಂದು ಕಿ.ಮೀವರೆಗೆ ಪಾದಯಾತ್ರೆ ನಡೆಸಿ, ಬಳಿಕ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಲಾಗುತ್ತದೆ. ಈ ಮೂಲಕ ಸಚಿವ ಸಂಪುಟದ ಆದೇಶವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ತೀವ್ರ ಒತ್ತಡ ಹೇರಲು ಮುಂದಾಗಿದೆ.
ವಂದೇ ಮಾತರಂ ಕೇವಲ ಹಾಡು ಅಲ್ಲ. ಸಿಎಂ ಡಿಕೆ ಶಿವಕುಮಾರ್ ಎರಡೇ ಚರಣ ಹಾಡಬೇಕು ಎಂದು ತೀರ್ಮಾನಿಸಿರುವುದು ದುರ್ದೈವ. ಅಲ್ಪಸಂಖ್ಯಾತರ ಓಲೈಕೆಗೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸೆ. 15 ರಿಂದ ಐದು ದಿನಗಳ ಕಾಲ 224 ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ತಹಶಿಲ್ದಾರ್ ಮತ್ತು ಡಿಸಿಗಳನ್ನು ಭೇಟಿ ಮಾಡಿ ಸರ್ಕಾರದ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹ ಮಾಡಲಿದ್ದೇವೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಈ ನಿರ್ಧಾರ ಮಾಡಿದೆ. ಡಿ.ಕೆ.ಶಿವಕುಮಾರ್ ಜಮ್ಮು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ ಅವರಿಂದ ಪಾಠ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಅಸಹಾಯಕರ ಮೇಲೆ ಪೌರುಷ ತೋರಿಸುವ ಬದಲು, ನನ್ನೊಂದಿಗೆ ಪೌರುಷ ತೋರಿಸಿ: ಇನ್ಸ್ ಪೆಕ್ಟರ್ ಧನಂಜಯ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು
ಮೈಸೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಸೀದಿಗಳ ಮುಂದೆ ಗಣೇಶ ಮೂರ್ತಿ ಮೆರವಣಿಗೆ ನಡೆಸದಂತೆ ಟಿ.ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಎಚ್ಚರಿಕೆ ಮತ್ತು ನಿರ್ಬಂಧಗಳ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಮತ್ತು ಟಿ. ನರಸೀಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಧನಂಜಯ್ ಹೇಳಿದ್ದಾರೆ. ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು. ಬೇರೆ ರಸ್ತೆಗಳ ಮೂಲ ಹೋಗಬೇಕು. ನಾವು ಯಾವ ರಸ್ತೆ ಮಾಅರ್ಗಗಳನ್ನು ಸೂಚಿಸುತ್ತೇವೆಯೋ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗಬೇಕು ಎಂದು ಹೇಳಿದ್ದರು.
ಅನಗತ್ಯವಾಗಿ ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು, ಮಸೀದಿಗಳ ಮುಂದೆ ಹೋಗಿ ಮೆರವಣಿಗೆ ನಿಲ್ಲಿಸಿ, ಕುಣಿಯುವುದು, ಗಲಭೆ ಸೃಷ್ಟಿಸುವುದು ಕಂಡುಬಂದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ನಮ್ಮ ಹಬ್ಬವನ್ನು ನೋಡಿ ಬೇರೆಯವರು ಗೌರವ ಕೊಡಬೇಕು. ಯಾವ ಧರ್ಮವಾದರೇನು? ಅವರಧರ್ಮ ಅವರಿಗೆ ಹೆಚ್ಚು. ಗಣೇಶ ಹಬ್ಬದಂದು ಮಸೀದಿ ಮುಂದೆ ಹೋಗಿ ಕುಣಿಯಬೇಕೆಂದು ಎಲ್ಲಿಯೂ ಹೇಳಿಲ್ಲ. ನಮ್ಮ ಹಬ್ಬದ ಆಚರಣೆ ನೋಡಿ ಇತರು ಗೌರವಿಸಲಿ ಎಂದು ಹೇಳಿಕೆ ನೀಡಿದ್ದರು. ಇನ್ಸ್ ಪೆಕ್ಟರ್ ಧನಂಜಯ್ ಅವರ ಖಡಕ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಇನ್ಸ್ ಪೆಕ್ಟರ್ ಧನಂಜಯ್ ಹೇಳಿಕೆಗೆ ಮಾಅಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “ಇನ್ನೊಂದು ಸಾರಿ ಅಂತಹ ಮಾತು ನಿಮ್ಮ ಬಾಯಿಂದ ಬಂದರೆ, ನಿಮ್ಮ ಠಾಣೆಗೆ ಬಂದು ನುಗ್ಗುತ್ತೇನೆ” ಎಂದು ಎಚ್ಚರಿಸಿದ್ದಾರೆ.
ಅಸಹಾಯಕ ಯುವಕರ ಮೇಲೆ ಪೌರುಷ ತೋರಿಸುವ ಬದಲು, ನಾನು ಬಂದಾಗ ನನ್ನೊಂದಿಗೆ ಪೌರುಷ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಮಾತ್ರ ಮಸೀದಿಗಳ ಮುಂದೆ ಪೊಲೀಸ್ ಭದ್ರತೆ ಇರುತ್ತದೆ, ಆದರೆ ಮೊಹರಂ ಅಥವಾ ಈದ್ ಮೆರವಣಿಗೆಗಳ ಸಂದರ್ಭದಲ್ಲಿ ದೇವಸ್ಥಾನಗಳ ಮುಂದೆ ಇದೇ ರೀತಿಯ ಭದ್ರತೆ ಯಾಕೆ ಇರುವುದಿಲ್ಲ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಈ ನಿರ್ಬಂಧಗಳು ಏಕಪಕ್ಷೀಯವಾಗಿವೆ. ಇನ್ಸ್ ಪೆಕ್ಟರ್ ಧನಂಜಯ್ ಅವರ ಹೇಳಿಕೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

