HomeIndiaBIG NEWS: ವಿಮಾನದಲ್ಲೇ ಪ್ರಯಾಣಿಕ ದುರ್ಮರಣ; ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

BIG NEWS: ವಿಮಾನದಲ್ಲೇ ಪ್ರಯಾಣಿಕ ದುರ್ಮರಣ; ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

ಹೈದರಾಬಾದ್: ಹಾರಾಟ ನಡೆಸಿದ್ದ ವಿಮಾನದಲ್ಲಿಯೇ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಜೆಡ್ಡಾದಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ.

ಪ್ರಯಾಣಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನವನ್ನು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಪ್ರಯಾಣಿಕನಿಗೆ ಸೂಕ್ತ ಚಿಕಿತ್ಸೆ ನೀಡಿದರೂ ಆತ ಬದುಕುಳಿಯಲಿಲ್ಲ. ಇಂಡಿಗೋ ಅಧಿಕಾರಿಗಳು ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣಕ್ಕೆ ವಿಮಾನವನ್ನು ಕರಾಚಿಯಲ್ಲಿ ಸುದೀರ್ಘ ಕಾಲ ತುರ್ತು ಭೂಸ್ಪರ್ಶ ಮಾಡಲಾಗಿದೆ. ಪ್ರಯಾಣಿಕ ಮೃತಪಟ್ಟಿದ್ದು ದೃಢ ಎಂದು ವೈದ್ಯರು ಘೋಷಿಸಿದ ಬಳಿಕ ಕರಾಚಿಯಿಂದ ಹೈದರಾಬಾದ್ ಗೆ ವಿಮಾನ ಬಂದಿಳಿದಿದೆ ಎಂದು ವಿಮಾನ ಯಾನ ಸಂಸ್ಥೆ ಮಾಹಿತಿ ನೀಡಿದೆ.

 

For Latest News Updates, Join Our Whatsapp Community🚩
RELATED ARTICLES

Most Popular