HomeLatest News10 ಲಕ್ಷಕ್ಕೆ ಒಂದು ಬಾಟಲಿ ವಿಶ್ವದ ಶ್ರೀಮಂತ ವಿಸ್ಕಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಲಿಕ್ವಿಡ್...

10 ಲಕ್ಷಕ್ಕೆ ಒಂದು ಬಾಟಲಿ ವಿಶ್ವದ ಶ್ರೀಮಂತ ವಿಸ್ಕಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಲಿಕ್ವಿಡ್ ಗೋಲ್ಡ್ ಯಾವುದು ಗೊತ್ತಾ?

ವಿಸ್ಕಿ ಸಾಮ್ರಾಜ್ಯದ ಅಧಿಪತಿಗಳೆಂದು ಮೆರೆಯುತ್ತಿದ್ದ ಸ್ಕಾಟ್ಲೆಂಡ್ ಮತ್ತು ಜಪಾನ್‌ ದೇಶಗಳ ಸಾರ್ವಭೌಮತ್ವಕ್ಕೆ ಬೆಂಗಳೂರು ಮೂಲದ ‘ಅಮೃತ್ ಡಿಸ್ಟಿಲರೀಸ್’ ಈಗ ಸಡ್ಡು ಹೊಡೆದಿದೆ! ವಿಶ್ವದ ಅತ್ಯಂತ ಪ್ರತಿಷ್ಠಿತ ಮದ್ಯ ವಿಮರ್ಶೆ ಎಂದೇ ಪರಿಗಣಿಸಲಾಗುವ ಜಿಮ್ ಮರ್ರೆ ಅವರ ‘ವಿಸ್ಕಿ ಬೈಬಲ್ 2025-26’ ರ ವರದಿಯಲ್ಲಿ, ಭಾರತದ ಹೆಮ್ಮೆಯ ‘ಅಮೃತ್ ಎಕ್ಸ್‌ಪೆಡಿಶನ್’ (Amrut Expedition) 15 ವರ್ಷ ಹಳೆಯ ಸಿಂಗಲ್ ಮಾಲ್ಟ್ ವಿಸ್ಕಿಯು ಜಗತ್ತಿನ 3ನೇ ಅತ್ಯುತ್ತಮ ವಿಸ್ಕಿ ಎಂಬ ಐತಿಹಾಸಿಕ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆ ಮೂಲಕ ಜಾಗತಿಕ ಮದ್ಯದ ಮಾರುಕಟ್ಟೆಯಲ್ಲಿ ಭಾರತದ ‘ಲಿಕ್ವಿಡ್ ಗೋಲ್ಡ್’ ಈಗ ಹೊಸ ಹವಾ ಸೃಷ್ಟಿಸಿದೆ

ಬರೋಬ್ಬರಿ 10 ಲಕ್ಷ ರೂಪಾಯಿ ಬೆಲೆಯ ಈ ಲಿಕ್ವಿಡ್ ಗೋಲ್ಡ್, 15 ವರ್ಷಗಳ ಕಾಲ ಭಾರತದ ಕಠಿಣ ಹವಾಮಾನದಲ್ಲಿ ಪಕ್ವಗೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಟೀಕಾಕಾರರ ಬಾಯಿ ಮುಚ್ಚಿಸಿ ಸ್ಕಾಚ್ ಸಾಮ್ರಾಜ್ಯದ ಕೋಟೆಯನ್ನು ಭೇದಿಸಿರುವ ಈ ಮೇಡ್ ಇನ್ ಬೆಂಗಳೂರು ವಿಸ್ಕಿ ಈಗ ಜಗತ್ತಿನ ಶ್ರೀಮಂತ ಹೂಡಿಕೆದಾರರು ಮತ್ತು ಮದ್ಯ ಪ್ರಿಯರ ಹಾಟ್ ಫೇವರಿಟ್

ಈ ಐತಿಹಾಸಿಕ ಯಶಸ್ಸಿನ ಬಗ್ಗೆ ಮಾತನಾಡಿದ ಅಮೃತ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಕ್ಷಿತ್ ಎನ್. ಜಗದಾಳೆ, ಇದು ಕೇವಲ ಒಂದು ಕ್ಷಣದ ಮ್ಯಾಜಿಕ್ ಅಲ್ಲ ಯಾರೂ ನಮ್ಮನ್ನು ನಂಬದಿದ್ದಾಗ ನಾವು ನಮ್ಮ ಕಲೆ ಮತ್ತು ಪರಿಶ್ರಮದ ಮೇಲೆ ಇಟ್ಟಿದ್ದ ದಶಕಗಳ ನಂಬಿಕೆಗೆ ಸಿಕ್ಕ ಪ್ರತಿಫಲ ಎಂದು ಹೆಮ್ಮೆಯಿಂದ ಹೇಳಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಪ್ರತಿಷ್ಠಿತ ಜಿಮ್ ಮುರ್ರೆ ವಿಸ್ಕಿ ಬೈಬಲ್?

ಜಗತ್ತಿನಾದ್ಯಂತ ಇರುವ ಮದ್ಯ ಪ್ರಿಯರಿಗೆ ಜಿಮ್ ಮುರ್ರೆ ಅವರ ‘ವಿಸ್ಕಿ ಬೈಬಲ್’ ಎನ್ನುವುದು ಒಂದು ಪವಿತ್ರ ಗ್ರಂಥವಿದ್ದಂತೆ. ಪ್ರತಿ ವರ್ಷ ಜಿಮ್ ಮುರ್ರೆ ಅವರು ಜಗತ್ತಿನ ಸುಮಾರು 4,000ಕ್ಕೂ ಹೆಚ್ಚು ವಿವಿಧ ಬ್ರ್ಯಾಂಡ್‌ಗಳ ವಿಸ್ಕಿಯನ್ನು ಖುದ್ದಾಗಿ ರುಚಿ ನೋಡಿ ಶ್ರೇಯಾಂಕ ನೀಡುತ್ತಾರೆ.

ವಿಶೇಷತೆ: ಈ ಬಾರಿ ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಪಾನ್‌ನ ದೈತ್ಯ ಬ್ರ್ಯಾಂಡ್‌ಗಳನ್ನೇ ಸೈಡಿಗೆ ತಳ್ಳಿರುವ ನಮ್ಮ ಅಮೃತ್ ಲಿಕ್ವಿಡ್ ಗೋಲ್ಡ್ ಎಂಬ ಬಿರುದಿನೊಂದಿಗೆ ವಿಶ್ವದ 3ನೇ ಅತ್ಯುತ್ತಮ ವಿಸ್ಕಿ ಪಟ್ಟಕ್ಕೆ ಏರಿದೆ. ಪ್ರಸ್ತುತ ಅಮೆರಿಕದ ಫುಲ್ ಪ್ರೂಫ್ 1972 ಬೋರ್ಬನ್ ಮೊದಲ ಸ್ಥಾನದಲ್ಲಿದೆ

ಹತ್ತು ಲಕ್ಷದ ‘ಲಿಕ್ವಿಡ್ ಗೋಲ್ಡ್’ : ಅಮೃತ್ ಎಕ್ಸ್‌ಪೆಡಿಶನ್ ವಿಶೇಷತೆಗಳು:

ಅತಿ ದುಬಾರಿ ಮದ್ಯ: ಒಂದು ಬಾಟಲಿಯ ಬೆಲೆ ಸರಿಸುಮಾರು Rs 10.5 ಲಕ್ಷ. ಇದು ಭಾರತದ ಅತ್ಯಂತ ದುಬಾರಿ ಸಿಂಗಲ್ ಮಾಲ್ಟ್ ಎನಿಸಿಕೊಂಡಿದೆ.

15 ವರ್ಷಗಳ ತಪಸ್ಸು: ಭಾರತದ ಬಿಸಿ ಹವಾಮಾನದಲ್ಲಿ ವಿಸ್ಕಿಯನ್ನು 15 ವರ್ಷಗಳ ಕಾಲ ಪಕ್ವಗೊಳಿಸುವುದು ಅತ್ಯಂತ ಸವಾಲಿನ ಕೆಲಸ. ಅಮೃತ್ ಈ ಹವಾಮಾನದ ಸವಾಲನ್ನು ಗೆದ್ದು ‘ಮೆಚ್ಯೂರಿಟಿ’ ಮತ್ತು ‘ಕಾಂಪ್ಲೆಕ್ಸಿಟಿ’ಯಲ್ಲಿ ವಿಶ್ವದ ಗಮನ ಸೆಳೆದಿದೆ.

ಸೀಮಿತ ಆವೃತ್ತಿ: ಸಂಸ್ಥೆಯ 75ನೇ ವರ್ಷಾಚರಣೆಯ ನೆನಪಿಗಾಗಿ ಕೇವಲ 75 ಬಾಟಲಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಇವುಗಳನ್ನು ಅತ್ಯಂತ ವಿಶಿಷ್ಟವಾದ ಪ್ಯಾಕೇಜಿಂಗ್‌ನಲ್ಲಿ ನೀಡಲಾಗುತ್ತಿದೆ.

ವಿಶಿಷ್ಟ ರುಚಿ: ಮೊದಲು 8 ವರ್ಷಗಳ ಕಾಲ ಯುರೋಪಿಯನ್ ಶೆರ್ರಿ ಬ್ಯಾರೆಲ್‌ಗಳಲ್ಲಿ ಮತ್ತು ನಂತರ 7 ವರ್ಷಗಳ ಕಾಲ ಅಮೆರಿಕನ್ ಎಕ್ಸ್-ಬೋರ್ಬನ್ ಬ್ಯಾರೆಲ್‌ಗಳಲ್ಲಿ ಇದನ್ನು ತಯಾರಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular