HomeKarnatakaಯದುವೀರ್ ಒಡೆಯರ್ ಭೇಟಿಯಾಗಿ ಮಹತ್ವದ ಬೇಡಿಕೆ ಮುಂದಿಟ್ಟ ಪ್ರತಾಪ್ ಸಿಂಹ

ಯದುವೀರ್ ಒಡೆಯರ್ ಭೇಟಿಯಾಗಿ ಮಹತ್ವದ ಬೇಡಿಕೆ ಮುಂದಿಟ್ಟ ಪ್ರತಾಪ್ ಸಿಂಹ

ಮಾಜಿ ಸಂಸದ ಪ್ರತಾಪ್ ಸಿಂಹ ಈಗ ಸುದ್ದಿಯಲ್ಲಿದ್ದಾರೆ. 2028ರ ವಿಧಾನಸಭೆ ಚುನಾವಣೆಗೆ ಅವರು ಮೈಸೂರು ನಗರದ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಈಗ ಪ್ರತಾಪ್ ಸಿಂಹ ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿದ್ದಾರೆ.

ಈ ಕುರಿತು ಪ್ರತಾಪ್ ಸಿಂಹ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಪ್ರತಾಪ್ ಸಿಂಹ ಅವರು ಯದುವೀರ್ ಒಡೆಯರ್ ಭೇಟಿಯಾಗಿದ್ದರು.

ಪ್ರತಾಪ್ ಸಿಂಹ ಮೈಸೂರು-ಕೊಡಗು ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ, ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ವಾಹನ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕೋರಿ ಮನವಿ ಮಾಡಲಾಯಿತು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಂಸದರಿಗೆ ಧನ್ಯವಾದಗಳು. ಈ ಸಂದರ್ಭದಲ್ಲಿ ನನ್ನ ಜೊತೆ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ, ಮುಖಂಡರುಗಳಾದ ಶ್ರೀ ಗಿರೀಶ್ ಪ್ರಸಾದ್, ಶ್ರೀ ಎಸ್ ಕೆ ದಿನೇಶ್, ಶ್ರೀ ಸೋಮಶೇಖರ್ ರಾಜು, ಶ್ರೀ ಕಿರಣ್ ಗೌಡ, ಶ್ರೀ ಪರಮೇಶ್ ಗೌಡ, ಶ್ರೀ ನಂಜಪ್ಪ, ಶ್ರೀ ಬ್ರಹ್ಮಚಾರ್, ಶ್ರೀ ರಾಜೇಶ್, ಶ್ರೀ ಅಶೋಕ್ ಹಾಗೂ ಮುಖಂಡರು ಉಪಸ್ಥಿತರಿದ್ದರು ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಲ್ಲಿಸಿದ ಮನವಿಗಳು

* ಮೈಸೂರು ನಗರದ ಕೆ.ಜಿ.ಕೊಪ್ಪಲಿನ ರೈಲ್ವೆ ಅಂಡರ್‌ ಬ್ರಿಡ್ಜ್‌ ಕಿರಿದಾಗಿದ್ದು, ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ರೈಲ್ವೆ ಅಂಡರ್‌ ಬ್ರಿಡ್ಜ್‌ ಅನ್ನು ವಿಸ್ತರಿಸಿ, ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಕೋರಲಾಗಿದೆ.

* ಮೈಸೂರು-ಅಶೋಕಪುರಂ ಬಿಜಿ ವಿಭಾಗದಲ್ಲಿ ಮೈಸೂರಿನ ಕ್ರಾಫರ್ಡ್ ಹಾಲ್ ಜಂಕ್ಷನ್ ಬಳಿ ಅಗಲವಾದ ರಸ್ತೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಾಣ – ಪ್ರಸ್ತಾವಿತ 5.5 ಮೀಟರ್ (ಪ್ರತಿ ದಿಕ್ಕಿನಲ್ಲಿ) ರಸ್ತೆಯ ಅಗಲವನ್ನು 7.5 ಮೀಟರ್‌ಗೆ ಹೆಚ್ಚಿಸುವ ಮೂಲಕ ಕೆಲಸವನ್ನು ತ್ವರಿತವಾಗಿ ಕಾರ್ಯಗತಗೊಳಿಸುವಂತೆ ಕೋರಲಾಗಿದೆ.

* ಕೆ.ಆರ್‌ ಎಸ್‌ ಸಂಪರ್ಕಿಸುವ ರಸ್ತೆಯು ಕಿರಿದಾಗಿದ್ದು, ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮೈಸೂರಿನ ಮೇಟಗಳ್ಳಿಯ ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಹೋಟೆಲ್ ಬಳಿ ಈಗಾಗಲೇ ಪ್ರಸ್ತಾವಿತ ರಸ್ತೆ ಕೆಳ ಸೇತುವೆ (ಆರ್‌ಯುಬಿ)ಯ ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ. ಹಾಗೂ ಹೊರ ವರ್ತುಲ ರಸ್ತೆ (ಎನ್‌ಎಚ್-275ಕೆ) ಉದ್ದಕ್ಕೂ ನಾಲ್ಕು ಆರ್‌ಯುಬಿಗಳ ಭಾಗವಾಗಿರುವ ಮೈಸೂರು-ಅರಸೀಕೆರೆ ಬ್ರಾಡ್ ಗೇಜ್ ವಿಭಾಗದಲ್ಲಿನ ಲೆವೆಲ್ ಕ್ರಾಸಿಂಗ್ ಅನ್ನು ತೆಗೆದುಹಾಕಲು ಮನವಿ ಮಾಡಲಾಗಿದೆ.

* ರೈಲು ಸಂಖ್ಯೆ 14805/06 ಯಶವಂತಪುರ – ಬಾರ್ಮೆರ್ – ಯಶವಂತಪುರ ಸಾಪ್ತಾಹಿಕ ರೈಲು (weekly train) ಅನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿದೆ.

* ರೈಲು ಸಂಖ್ಯೆ 16508/09 ಕೆ ಎಸ್ ಆರ್‌ ಬೆಂಗಳೂರು ಸಿಟಿ ಜಂಕ್ಷನ್‌ ಜೋಧಪುರ ದ್ವಿ- ಸಾಪ್ತಾಹಿಕ ರೈಲು (Bi-weekly train) ಅನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಸಹ ಮನವಿ ಸಲ್ಲಿಕೆ ಮಾಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular