HomeLatest NewsBig Update: ಬೆಂಗಳೂರು ಏರ್‌ಪೋರ್ಟ್‌ ರೋಡ್ ಸಂಚಾರ ಮಾರ್ಗ ಬದಲು, ಸಂಚಾರ ಸಲಹೆ

Big Update: ಬೆಂಗಳೂರು ಏರ್‌ಪೋರ್ಟ್‌ ರೋಡ್ ಸಂಚಾರ ಮಾರ್ಗ ಬದಲು, ಸಂಚಾರ ಸಲಹೆ

ಬೆಂಗಳೂರು ನಗರದ ಸಂಚಾರಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ವಾಹನ ಸವಾರರಿಗೆ ಮಾಹಿತಿಯನ್ನು ನೀಡಿದ್ದಾರೆ.

ದಿನಾಂಕ 23.01.2026 ರಿಂದ 25.01.2026ರ ತನಕ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ಈ ಮಾರ್ಗ ಬದಲಾವಣೆ ಜಾರಿಯಲ್ಲಿರುತ್ತದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವ ಹೆಬ್ಬಾಳ ಫ್ಲೈ ಓವರ್ ಮೆಲ್ಪದರ ಹಾಳಾಗಿರುವ ಕಾರಣ ಡಾಂಬರೀಕರಣ ಕಾಮಗಾರಿ ನಡೆಯುವ ಸಮಯದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ದರಿಂದ ಸಾರ್ವಜನಿಕರು ಹೆಬ್ಬಾಳ ಸರ್ವೀಸ್ ರಸ್ತೆಯ ಮೂಲಕ ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ಸ್ಥಳಗಳಲ್ಲಿ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ ಎಂದು ಹೇಳಿದ್ದಾರೆ. ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳ ವಿವರಗಳನ್ನು ಪೊಲೀಸರು ನೀಡಿದ್ದಾರೆ.

ಮಾರ್ಗ ಬದಲಾವಣೆ ವಿವರಗಳು

  • ಬೆಂಗಳೂರು ನಗರದ ಕಡೆಯಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಲು ಬದಲಿ ಮಾರ್ಗಗಳು.
  • ಬಿಬಿ ಮುಖ್ಯ ರಸ್ತೆ-ಸಂಜಯನಗರ ಕ್ರಾಸ್-ಎಡತಿರುವು-ಸಂಜಯನಗರ ಮುಖ್ಯರಸ್ತೆ-ಭದ್ರಪ್ಪ ಲೇಔಟ್-ಔಟ‌ರ್ ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.
  • ಬಿಬಿ ಮುಖ್ಯ ರಸ್ತೆ- ಸಿಬಿಐ ಸರ್ವಿಸ್ ರಸ್ತೆ/ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ-ಹೆಬ್ಬಾಳ ಬಸ್ ನಿಲ್ದಾಣದ ಸರ್ವಿಸ್ ರಸ್ತೆ(ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ)-ಹೆಬ್ಬಾಳ ಡೌನ್ ರ‍್ಯಾಂಪ್‌ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.
  • ಬಿಬಿ ಮುಖ್ಯ ರಸ್ತೆ – ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ- ಕೆ-2 ಬಸ್ ನಿಲ್ದಾಣ ಎಡ ತಿರುವು ಭೂಪಸಂದ್ರ ರಸ್ತೆ-ಬಲತಿರುವು-ಭದ್ರಪ್ಪ ಲೇಔಟ್-ಔಟರ್ ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.
  • ಬಿಬಿ ಮುಖ್ಯ ರಸ್ತೆ- ಸಿಬಿಐ ಸರ್ವಿಸ್ ರಸ್ತೆ/ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ-ಹೆಬ್ಬಾಳ ಬಸ್ ನಿಲ್ದಾಣದ ಸರ್ವಿಸ್ ರಸ್ತೆ(ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ)- ಕೆ.ಆರ್.ಪುರ‍ ಲೂಪ್ ರಸ್ತೆ-ಹೆಬ್ಬಾಳ ಔಟ‌ರ್ ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular