ನವದೆಹಲಿ: ಬಣ್ಣಗಳ ಹಬ್ಬ ಹೋಳಿ ಹತ್ತಿರವಾಗುತ್ತಿದ್ದಂತೆ ಊರಿಗೆ ಹೋಗುವವರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ರೈಲುಗಳಲ್ಲಿನ ವಿಪರೀತ ಜನದಟ್ಟಣೆ ತಪ್ಪಿಸಲು ಈ ಬಾರಿ ದಾಖಲೆ ಮಟ್ಟದ 1,410ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಈ ಸಂಖ್ಯೆ 1,500ರ ಗಡಿ ದಾಟಲಿದೆ,ಕಳೆದ ವರ್ಷಕ್ಕೆ (2025) ಹೋಲಿಸಿದರೆ ಈ ಬಾರಿ ಸುಮಾರು 300ಕ್ಕೂ ಹೆಚ್ಚು ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಿರುವುದು ವಿಶೇಷ.
ಎಲ್ಲಿ ಎಷ್ಟು ರೈಲುಗಳು? (ವಲಯವಾರು ಲಿಸ್ಟ್)
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಲಯವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ:
ಪೂರ್ವ ಮಧ್ಯ ರೈಲ್ವೆ: 285 ರೈಲುಗಳು (ಅತಿ ಹೆಚ್ಚು)
ಪಶ್ಚಿಮ ರೈಲ್ವೆ: 231 ರೈಲುಗಳು
ಮಧ್ಯ ರೈಲ್ವೆ: 209 ರೈಲುಗಳು
ಉತ್ತರ ರೈಲ್ವೆ: 108 ರೈಲುಗಳು
ವಾಯುವ್ಯ ರೈಲ್ವೆ: 71 ರೈಲುಗಳು
ಉತ್ತರ ಮಧ್ಯ ರೈಲ್ವೆ: 66 ರೈಲುಗಳು
ಈಶಾನ್ಯ ಮತ್ತು ಪೂರ್ವ ಕರಾವಳಿ ರೈಲ್ವೆ: ತಲಾ 62 ರೈಲುಗಳು
ನೈಋತ್ಯ ರೈಲ್ವೆ (SWR): 47 ರೈಲುಗಳು
ದಕ್ಷಿಣ ರೈಲ್ವೆ: 39 ರೈಲುಗಳು
ಪ್ರಯಾಣಿಕರ ಗಮನಕ್ಕೆ ಈ ಅಂಶಗಳಿರಲಿ:
ಅವಧಿ: ಈ ವಿಶೇಷ ರೈಲುಗಳು ಮುಖ್ಯವಾಗಿ ಮಾರ್ಚ್ ತಿಂಗಳಿನಾದ್ಯಂತ ಸಂಚರಿಸಲಿವೆ.
ಉತ್ತರ ಮಧ್ಯ ರೈಲ್ವೆ ಅಪ್‌ಡೇಟ್: ಈ ವಲಯವೊಂದರಲ್ಲೇ ಒಟ್ಟು 204 ಟ್ರಿಪ್‌ಗಳ ಸೇವೆಯನ್ನು ನೀಡಲಾಗುತ್ತಿದ್ದು, ಪ್ರಯಾಣಿಕರ ದಟ್ಟಣೆ ಇರುವ ಪ್ರಮುಖ ನಗರಗಳನ್ನು ಇವು ಸಂಪರ್ಕಿಸಲಿವೆ.
ಬುಕಿಂಗ್ ಹೇಗೆ?: ನೀವು ಈಗಲೇ IRCTC ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ರೈಲಿನ ಲೈವ್ ಸ್ಟೇಟಸ್ ತಿಳಿಯಲು NTES ಆ್ಯಪ್ ಬಳಸಿ.
ಹಬ್ಬದ ಸಮಯದಲ್ಲಿ ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಈಗಲೇ ನಿಮ್ಮ ಟಿಕೆಟ್ ಕಾಯ್ದಿರಿಸುವುದು ಜಾಣತನ. ರೈಲ್ವೆ ಇಲಾಖೆ ಈ ಬಾರಿ ಕೇವಲ ರೈಲುಗಳ ಸಂಖ್ಯೆಯನ್ನಷ್ಟೇ ಅಲ್ಲ, ಸುರಕ್ಷತೆಯನ್ನೂ ಕೂಡ ಪ್ರಮುಖ ಆದ್ಯತೆಯನ್ನಾಗಿ ಇರಿಸಿಕೊಂಡಿದೆ

