ಬೆಂಗಳೂರು: ಬಿಗ್ ಬಾಸ್ ಸೀಜನ್ 12ರ ವಿನ್ನರ್ ಗಿಲ್ಲಿ ವಿರುದ್ಧ ನಿರ್ಮಾಪಕರೊಬ್ಬರು ಫಿಲ್ಮ್ ಚೇಂಬರ್ ಗೆ ದೂರು ನೀಡಿರುವ ಘಟನೆ ನಡೆದಿದೆ.
‘ಸರ್ಕಾರಿ ಶಾಲೆ H8’ ಸಿನಿಮಾದ ನಿರ್ಮಾಪಕರು ಗಿಲ್ಲಿ ವಿರುದ್ಧ ದೂರು ನೀಡಿದ್ದಾರೆ. ಗಿಲ್ಲಿ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಗಿಲ್ಲಿ ಕೇಳಿದಷ್ಟು ಸಂಭಾವನೆಯನ್ನು ಕೊಟ್ಟು ಅವಕಾಶ ಕೊಟ್ಟಿದ್ವಿ. ಬಿಗ್ ಬಾಸ್ ರಿಯಾಲಿಟಿ ಶೋಗೆ ಗಿಲ್ಲಿ ಹೋಗುವ ಮೊದಲೇ ಸಂಭಾವನೆ ನೀಡಿದ್ದೆವು. ಆದರೆ ಈಗ ಗಿಲ್ಲಿ ಸಿನಿಮಾ ಪ್ರಮೋಷನ್ ಗೆ ಬರುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಎಷ್ಟು ಬಾರಿ ಕರೆ ಮಾಡಿದರೂ ಗಿಲ್ಲಿ ಫೋನ್ ಸ್ವೀಕರಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಒಂದು ಪೋಸ್ಟ್ ಕೂಡ ಮಾಡುತ್ತಿಲ್ಲ ಎಂದು ನಿರ್ಮಾಪಕರು ದೂರು ನೀಡಿದ್ದಾರೆ.

