ಕನ್ನಡ ಚಿತ್ರರಂಗದಲ್ಲಿ ಈಗ ಕರಾವಳಿಗರದ್ದೇ ಪ್ರಾಬಲ್ಯ. ಇಂತಹ ಹೊತ್ತಿನಲ್ಲಿ ಬಿಡುಗಡೆಗೆ ತಯಾರಾಗಿರುವ ‘ಕರಾವಳಿ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ಮೊದಲ ರೊಮ್ಯಾಂಟಿಕ್ ಹಾಡು ‘ಮುದ್ದು ಗುಮ್ಮ’ಕ್ಕೆ ಸಿದ್ ಶ್ರೀರಾಮ್ ಧ್ವನಿಯಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಈಗ ‘ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ’ ಎಂಬ ಹಾಡು ಸದ್ದು ಮಾಡುತ್ತಿದೆ. ಇದು ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ.ಶೆಟ್ಟಿ ಅಭಿನಯದ ‘ಕರಾವಳಿ’ ಚಿತ್ರದ ಹಾಡು.
‘ಮುದ್ದು ಗುಮ್ಮ’ ಹಾಡು ಬಿಡುಗಡೆಯಾಗಿದ್ದು, ಮೆಲೋಡಿ ಹಾಡುಗಳ ಮೂಲಕ ಜನರ ಹೃದಯ ಕದ್ದ ಗಾಯಕ ಸಿದ್ ಶ್ರೀರಾಮ್ ಎಲ್ಲರೂ ಈ ಹಾಡನ್ನು ಗುನುಗುವಂತೆ ಮಾಡಿದ್ದಾರೆ. ಹಾಡಿನ ಟ್ರೆಂಡ್ ನೋಡಿದರೆ ಬ್ಲಾಕ್ ಬಸ್ಟರ್ ಹಿಟ್ ಹಾಡುಗಳ ಪಟ್ಟಿಗೆ ‘ಮುದ್ದು ಗುಮ್ಮ’ ಸೇರಿಕೊಳ್ಳುವುದು ಖಚಿತ.
2026ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ‘ಕರಾವಳಿ’. ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೀಸರ್ ಮತ್ತು ಪೋಸ್ಟರ್‌ಗಳು ಬಿಡುಗಡೆಯಾಗಿದ್ದು ಪ್ರಜ್ವಲ್ ದೇವರಾಜ್ ಲುಕ್ ಅಪಾರ ನಿರೀಕ್ಷೆ ಹುಟ್ಟಿಸಿದೆ.
ಈಗ ‘ಕರಾವಳಿ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಕ್ಯಾಮರಾ ಕಣ್ಣಲ್ಲಿ, ಸಿದ್ ಶ್ರೀರಾಮ್ ಧ್ವನಿ ಸೇರಿ ಜೋಡಿ ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸುತ್ತಿದ್ದಾರೆ.
‘ಕರಾವಳಿ’ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ. ‘ಮುದ್ದು ಗುಮ್ಮ’ ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರಮೋದ್ ಮರವಂತೆ. ಟೀಸರ್ ಮೂಲಕವೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ ಸಿನಿಮಾ ಈಗ ರೊಮ್ಯಾಂಟಿಕ್ ಹಾಡು ಬಿಡುಗಡೆ ಮಾಡಿ ಸಿನಿಮಾ ಪ್ರೇಮಿಗಳ ಎದೆ ಬಡಿತ ಹೆಚ್ಚಿಸಿದೆ.
‘ಕರಾವಳಿ’ ಸಿನಿಮಾ ಬಿಡುಗಡೆ ಯಾವಾಗ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರದ ಹೆಸರು ಹೇಳುವಂತೆ ಕರಾವಳಿಯ ಸಂಸ್ಕೃತಿ, ಸೊಗಡನ್ನು ಚಿತ್ರವು ಹೊಂದಿದೆ.
ಪ್ರಮುಖ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ನಟಿಸಿದ್ದಾರೆ. ಮಾವೀರ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಇತರರು ಇದ್ದಾರೆ.
‘ಕರಾವಳಿ’ಯನ್ನು ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲ್ಮ್ಸ್ ಅಡಿ ನಿರ್ಮಾಣ ಮಾಡಲಾಗಿದೆ. ಚಿತ್ರವು ಮನುಷ್ಯ ಹಾಗೂ ಪ್ರಾಣಿಗಳ ಮಧ್ಯೆ ನಡೆಯುವ ಸಂಘರ್ಷದ ಕಥೆ ಎಂದು ಅಂದಾಜಿಸಲಾಗಿದೆ. ಕರಾವಳಿಯ ಸುಂದರ ಚಿತ್ರಣವನ್ನು ಅಭಿಮನ್ಯೂ ಸದಾನಂದನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

