HomeLatest Newsಮೈಸೂರು ಮೃಗಾಲಯದ 'ಪ್ರಾಚಿ' ಜೀಬ್ರಾ ಕರುಳಿನ ಕಾಯಿಲೆಗೆ ಬಲಿ: ಎರಡು ದಿನಗಳ ಹಿಂದಷ್ಟೇ ಮರಿಗೆ ಜನ್ಮ...

ಮೈಸೂರು ಮೃಗಾಲಯದ ‘ಪ್ರಾಚಿ’ ಜೀಬ್ರಾ ಕರುಳಿನ ಕಾಯಿಲೆಗೆ ಬಲಿ: ಎರಡು ದಿನಗಳ ಹಿಂದಷ್ಟೇ ಮರಿಗೆ ಜನ್ಮ ನೀಡಿದ್ದ ಜೀಬ್ರಾ

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಎರಡು ದಿನಗಳ ಹಿಂದಷ್ಟೇ ಹೆಣ್ಣು ಮರಿಗೆ ಜನ್ಮ ನೀಡಿದ್ದ ‘ಪ್ರಾಚಿ’ ಜೀಬ್ರಾ ಕರುಳಿನ ಕಾಯಿಲೆಗೆ ಬಲಿಯಾಗಿರುವ ಘಟನೆ ನಡೆದಿದೆ.

10 ವರ್ಷದ ಜೀಬ್ರಾ ‘ಪ್ರಾಚಿ’ ಕರುಳಿನ ಕಾಯಿಲೆಯಿಂದ ಮೃತಪಟ್ತಿದೆ. ಹೆರಿಗೆಯ ನಂತರ ಉಂಟಾದ ತೀವ್ರ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಚಿ ಜೀಬ್ರಾವನ್ನು ಇಸ್ರೇಲ್‌ನಿಂದ ತರಲಾಗಿತ್ತು.ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಇದೀಗ ಹುಟ್ಟಿದ ಪುಟ್ಟ ಮರಿಗೆ ಮೃಗಾಲಯದ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ.

2018ರ ಸೆಪ್ಟೆಂಬರ್ 4ರಂದು ಪ್ರಾಚಿಯನ್ನು ಇಸ್ರೇಲ್‌ನ ರಾಮತ್ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿತ್ತು. ಕಳೆದ 10 ವರ್ಷಗಳಿಂದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರಾಚಿ, ಇಲ್ಲಿಯವರೆಗೆ ಐದು ಮರಿಗಳಿಗೆ ಜನ್ಮ ನೀಡಿದ್ದು, ಇತ್ತೀಚೆಗೆ ಆರನೇ ಮರಿಯನ್ನು ಹೆತ್ತಿತ್ತು.

ಹೆರಿಗೆ ಬಳಿಕ ಪ್ರಾಚಿಯ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಕರುಳಿನ ಕಾಯಿಲೆಯಿಂದ ಪ್ರಾಚಿ ಬಳಲುತ್ತಿರುವುದು ತಿಳಿದುಬಂದಿತ್ತು. ಮೃಗಾಲಯದ ಪಶುವೈದ್ಯರು ಮತ್ತು ಸಿಬ್ಬಂದಿ ನಿರಂತರ ಚಿಕಿತ್ಸೆ ನೀಡುತ್ತಿದ್ದರು. ಆದರೂ ಚಿಕಿತ್ಸೆ ಫಲಿಸದೇ ಪ್ರಾಚಿ ಸಾವನ್ನಪ್ಪಿದೆ.

ಪ್ರಾಚಿ ಸಾವಿನಿಂದ ಮೃಗಾಲಯದಲ್ಲಿ ದು:ಖ ಆವರಿಸಿದೆ. ಕೆಲವೇ ದಿನಗಳ ಹಿಂದೆ ಪ್ರಾಚಿ ಮರಿಗೆ ಜನ್ಮ ನೀಡಿದ್ದು, ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಎರಡೇ ದಿನಗಳಲ್ಲಿ ಆ ಸಮ್ಭ್ರಮ ಮರೆಯಾಗಿದ್ದು ದುಃಖ ಮಡುಗಟ್ಟಿದೆ. ಪ್ರಾಚಿಗೆ ಜನಿಸಿದ ಹೆಣ್ಣು ಮರಿ ಸಂಪೂರ್ಣ ಆರೋಗ್ಯವಾಗಿದ್ದು, ಮೃಗಾಲಯದ ಸಿಬ್ಬಂದಿ ಹಾಲುಣಿಸಿ ವಿಶೇಷ ಆರೈಕೆ ನೀಡುತ್ತಿದ್ದಾರೆ. ಪಶುವೈದ್ಯರ ನಿಗಾದಲ್ಲಿ ಮರಿಯನ್ನು ಬೆಳೆಸಲಾಗುತ್ತಿದೆ.

ಇನ್ನು ಪ್ರಾಚಿ ಮರಣೋತ್ತರ ಪರೀಕ್ಷೆಯ ಬಳಿಕ ನಿಯಮಾನುಸಾರ ಪ್ರಾಚಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular