HomeCrimeತಮಾಷೆಗಾಗಿ ಕಾಲಿಂಗ್​ ಬೆಲ್​ ಒತ್ತಿ ಕಿರಿಕಿರಿ: ಮೂವರು ಮಕ್ಕಳನ್ನು ಹತ್ಯೆಗೈದ ಮನೆ ಮಾಲೀಕನಿಗೆ ಶಿಕ್ಷೆ

ತಮಾಷೆಗಾಗಿ ಕಾಲಿಂಗ್​ ಬೆಲ್​ ಒತ್ತಿ ಕಿರಿಕಿರಿ: ಮೂವರು ಮಕ್ಕಳನ್ನು ಹತ್ಯೆಗೈದ ಮನೆ ಮಾಲೀಕನಿಗೆ ಶಿಕ್ಷೆ

ನ್ಯೂಯಾರ್ಕ್: ತಮಾಷೆ ಮಾಡಲು ಮೂವರು ಮಕ್ಕಳು ವ್ಯಕ್ತಿಯೊಬ್ಬನ ಮನೆಯ ಕಾಲಿಂಗ್​ ಬೆಲ್​ ಬಾರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಲೆ ಆರೋಪಿಯನ್ನು ಭಾರತೀಯ ಮೂಲದವ ಎಂದು ಹೇಳಲಾಗಿದೆ. ರಿವರ್‌ಸೈಡ್ ಕೌಂಟಿಯ ನಿವಾಸಿ ಅನುರಾಗ್ ಚಂದ್ರನನ್ನು ಪೊಲೀಸರು ಬಂಧಿಸಿದ್ದು, ಈಗ ಈತನೇ ಅಪರಾಧಿ ಎಂದು ಸಾಬೀತಾಗಿದೆ.

ಅನುರಾಗ್ ಚಂದ್ರನ ಮನೆಯ ಕರೆಗಂಟೆಯನ್ನು ಮೂವರು ಮಕ್ಕಳು ಪದೇ ಪದೇ ಬಂದು ಬಾರಿಸುತ್ತಿದ್ದರು. ಇದರಿಂದ ಕಿರಿಕಿರಿಗೊಂಡ ಅನುರಾಗ್ ಚಂದ್ರ, ಮಕ್ಕಳನ್ನು ಸಾಯಿಸಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯು ಜನವರಿ 19, 2020 ರಂದು ನಡೆದಿತ್ತು. ಇದೀಗ ಆರೋಪಿಯ ಆರೋಪ ಸಾಬೀತಾಗಿದೆ. ಭಾರತೀಯ ಮೂಲದ ಅನುರಾಗ್​ ಚಂದ್ರ ತಪ್ಪಿತಸ್ಥನೆಂದು ಕೋರ್ಟ್​ ಆದೇಶಿಸಿದೆ. ಘಟನೆಯ ದಿನ ಅಪರಾಧಿ 12 ಬಾಟಲಿ ಬಿಯರ್‌ ಸೇವಿಸಿದ್ದ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular