ನವದೆಹಲಿ: ಭಾರತವು ನಗರಗಳ ನಡುವೆ 7 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.
ಭಾರತದಲ್ಲಿ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳ ಅಭಿವೃದ್ಧಿಯನ್ನು ನಾವು ಪ್ರಸ್ತಾಪಿಸಿದ್ದೇವೆ. ಪ್ರಮುಖ ಮಾರ್ಗಗಳು: ಮುಂಬೈನಿಂದ ಪುಣೆ; ಪುಣೆಯಿಂದ ಹೈದರಾಬಾದ್; ಹೈದರಾಬಾದ್‌ನಿಂದ ಬೆಂಗಳೂರು; ಬೆಂಗಳೂರಿನಿಂದ ಚೆನ್ನೈ. 2026-27ರ ಕೇಂದ್ರ ಬಜೆಟ್ ಅಡಿಯಲ್ಲಿ ದೇಶಾದ್ಯಂತ ಪ್ರಾದೇಶಿಕ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು ಹೆಚ್ಚುವರಿ ಕಾರಿಡಾರ್‌ಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.
ಜವಳಿ ಕ್ಲಸ್ಟರ್‌ಗಳನ್ನು ಆಧುನೀಕರಿಸಲು ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ. ಜವಳಿ ವಲಯದಲ್ಲಿ ಕೌಶಲ್ಯವನ್ನು ಉತ್ತೇಜಿಸಲು ಸಮರ್ಥ್ 2.0 ಗುರಿ. ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲು, ಖಾದಿ, ಕರಕುಶಲ ವಸ್ತುಗಳನ್ನು ಬೆಂಬಲಿಸಲು ಮಹಾತ್ಮ ಗಾಂಧಿ ಗ್ರಾಮ ಸಮಾಜ ಉಪಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

