ನವದೆಹಲಿ: ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಪಾಲಿಗೆ 2026-27ನೇ ಸಾಲಿನ ಬಜೆಟ್ ಹೊಸ ಚೈತನ್ಯ ತಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಲಯವನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲು ಬೃಹತ್ ಯೋಜನೆಗಳನ್ನು ಘೋಷಿಸಿದ್ದಾರೆ.
1.₹10,000 ಕೋಟಿಯಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿ
ಸಣ್ಣ ಉದ್ದಿಮೆದಾರರಿಗೆ ಅತ್ಯಾಧುನಿಕ ಮೂಲಸೌಕರ್ಯ ಒದಗಿಸಲು ಸರ್ಕಾರ ಬರೋಬ್ಬರಿ 10,000 ಕೋಟಿ ರೂಪಾಯಿ ಮೀಸಲಿಟ್ಟಿದೆ.ದೇಶಾದ್ಯಂತ ಇರುವ ಸುಮಾರು 200 ಕೈಗಾರಿಕಾ ಹಬ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು.ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಇನ್ನು ಮುಂದೆ ಅಲೆಯಬೇಕಿಲ್ಲ; ಒಂದೇ ಸೂರಿನಡಿ ತಾಂತ್ರಿಕ ನೆರವು ಮತ್ತು ಪರೀಕ್ಷಾ ಕೇಂದ್ರಗಳು ಲಭ್ಯವಾಗಲಿವೆ.
2.ರೇರ್ ಅರ್ಥ್ ಮಿಷನ್: ಚೀನಾಕ್ಕೆ ಟಕ್ಕರ್
ಚಿಪ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ‘ವಿರಳ ಭೂಧಾತು’ (Rare Earth Elements) ಗಣಿಗಾರಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ದೇಶೀಯ ಗಣಿಗಾರಿಕೆಗೆ ಕೇಂದ್ರ ಸರ್ಕಾರ ವಿಶೇಷ ಪ್ರೋತ್ಸಾಹ ಧನ ನೀಡಲಿದೆ.
4.MSMEಗಳಿಗೆ ಡಿಜಿಟಲ್ ರೆಕ್ಕೆ ಹಾಗೂ ಸಾಲದ ಭರವಸೆ
ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗಾಗಿ (MSEs) ವಿಶೇಷ ಪ್ಯಾಕೇಜ್ ನೀಡಲಾಗಿದ್ದು, ಸಾಲದ ಗ್ಯಾರಂಟಿ ಮಿತಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಸಣ್ಣ ಉದ್ದಿಮೆಗಳು ಕಾಗದ ರಹಿತ ಆಡಳಿತಕ್ಕೆ ಒಗ್ಗಿಕೊಳ್ಳಲು ‘ಡಿಜಿಟಲ್ MSME’ ಯೋಜನೆಯಡಿ ತಾಂತ್ರಿಕ ನೆರವು ಸಿಗಲಿದೆ.

