2026-27ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಅರ್ಥ್ ಕಾರಿಡಾರ್ ಘೋಷಣೆ ಮಾಡಿದರು. ಗಣಿಗಾರಿಕೆಗೆ ಸಹಾಯ ಮಾಡುವ ಪ್ರತ್ಯೇಕ ವಿಶೇಷ ಕಾರಿಡಾರ್ ಇದಾಗಿದೆ.
ಫೆಬ್ರವರಿ 1ರ ಭಾನುವಾರ, ಮಾಘ ಪೂರ್ಣಿಮೆ ದಿನ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್. ಕರ್ತವ್ಯ ಭವನ್ನಲ್ಲಿ ತಯಾರು ಮಾಡಿದ ಮೊದಲ ಬಜೆಟ್ ಇದು, ಯುವ ಶಕ್ತಿ ಬಜೆಟ್ ಎಂದು ಬಣ್ಣಿಸಿದರು.
ಕೇಂದ್ರ ಬಜೆಟ್ 2026ರ ಭಾಷಣದಲ್ಲಿ ಅವರು ವಿಶೇಷ ‘ಅರ್ಥ್ ಕಾರಿಡಾರ್’ ಘೋಷಣೆ ಮಾಡಿದರು. ಗಣಿಗಾರಿಕೆ, ವಿಶೇಷ ಹವಳಗಳ ಗಣಿಗಾರಿಕೆಗಾಗಿ ಸಹಾಯ ಮಾಡುವ ವಿಶೇಷ ಕಾರಿಡಾರ್ ಇದಾಗಿದೆ ಎಂದರು.
ಈ ಮೂಲಕ ಕೇಂದ್ರ ಬಜೆಟ್ನಲ್ಲಿ ತಮಿಳುನಾಡು, ಕೇರಳಕ್ಕೆ ಕೇಂದ್ರ ಸರ್ಕಾರ ಕೊಡುಗೆಯನ್ನು ನೀಡಿತು. ಅರ್ಥ್ ಕಾರಿಡಾರ್ ವಿವಿಧ ರಾಜ್ಯಗಳನ್ನು ನೇರವಾಗಿ ಸಂಪರ್ಕ ಮಾಡಲು ಸಹಾಯ ಮಾಡಲಿದೆ.
ಈ ವಿಶೇಷ ಅರ್ಥ್ ಕಾರಿಡಾರ್ ತಮಿಳುನಾಡು, ಕೇರಳ, ಒಡಿಶಾ, ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಸಂಪರ್ಕವನ್ನು ಕಲ್ಪಿಸಲಿದೆ. ಇದು ಗಣಿಗಾರಿಕೆಗಾಗಿಯೇ ಘೋಷಣೆ ಮಾಡಲಾದ ವಿಶೇಷ ಕಾರಿಡಾರ್ ಆಗಿದೆ.
ಭೂ ಕಾರಿಡಾರ್: ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರದ ಬಜೆಟ್ನಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿಗೆ ವಿಶೇಷ ಭೂ ಕಾರಿಡಾರ್ ಘೋಷಣೆ ಮಾಡಿದರು.
ಬಜೆಟ್ ಭಾಷಣದಲ್ಲಿ ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳಗಳನ್ನು ಸಂಪರ್ಕಿಸಲು ಈ ಕಾರಿಡಾರ್ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.
ಇವು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಕ್ರಮಗಳಾಗಿದ್ದು, ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತವೆ. ಕೈಗಾರಿಕೆಗಳು ಮತ್ತು ಸ್ಥಳೀಯ ಆರ್ಥಿಕತೆಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತವೆ.

