HomeLatest Newsಬಂಗಾರ ಆಮದುದಾರರಿಗೆ ಕೇಂದ್ರದ ಭರ್ಜರಿ ಗಿಫ್ಟ್: 2029ರವರೆಗೆ ಚಿನ್ನ-ಬೆಳ್ಳಿ ಆಮದಿಗೆ 15 ಬ್ಯಾಂಕ್‌ಗಳಿಗೆ ಗ್ರೀನ್ ಸಿಗ್ನಲ್

ಬಂಗಾರ ಆಮದುದಾರರಿಗೆ ಕೇಂದ್ರದ ಭರ್ಜರಿ ಗಿಫ್ಟ್: 2029ರವರೆಗೆ ಚಿನ್ನ-ಬೆಳ್ಳಿ ಆಮದಿಗೆ 15 ಬ್ಯಾಂಕ್‌ಗಳಿಗೆ ಗ್ರೀನ್ ಸಿಗ್ನಲ್

ನವದೆಹಲಿ: ದೇಶದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಸ್ಥಿರತೆ ತರಲು ಹಾಗೂ ಪೂರೈಕೆಯಲ್ಲಿನ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2029ರ ಮಾರ್ಚ್ 31ರವರೆಗೆ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿಯನ್ನು (Bullion) ಆಮದು ಮಾಡಿಕೊಳ್ಳಲು ದೇಶದ 15 ಪ್ರಮುಖ ಬ್ಯಾಂಕ್‌ಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGFT) ಅಧಿಕೃತ ಅನುಮತಿ ನೀಡಿದೆ.

ಈ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿರುವ ಸಚಿವಾಲಯವು, ಆಮದು ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಧಿಕೃತ ಬ್ಯಾಂಕ್‌ಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ದೀರ್ಘಾವಧಿ ಅನುಮತಿಯಿಂದಾಗಿ ಮಾರುಕಟ್ಟೆಯಲ್ಲಿ ಹಳದಿ ಲೋಹದ ಲಭ್ಯತೆ ಹೆಚ್ಚಾಗಲಿದ್ದು, ಆಭರಣ ಉದ್ಯಮಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಪಾರದರ್ಶಕ ಆಮದು ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಈ ಮಹತ್ವದ ಕ್ರಮದ ಮುಖ್ಯ ಉದ್ದೇಶವಾಗಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ವರದಿಯ ಪ್ರಕಾರ 2025ರಲ್ಲಿ ಭಾರತದಲ್ಲಿ ಚಿನ್ನಕ್ಕೆ ಇರುವ ಬೇಡಿಕೆಯು 710.9 ಮೆಟ್ರಿಕ್ ಟನ್​ಗೆ ಇಳಿಕೆಯಾಗಿದೆ. ಚಿನ್ನದ ಬೆಲೆ ಏರಿಕೆ ಮತ್ತು ಗ್ರಾಹಕರಲ್ಲಿ ಉಂಟಾಗಿರುವ ಖರೀದಿ ನಿರಾಸಕ್ತಿ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್ಥಿಕತೆಗೆ ಲಾಭ: ಚಿನ್ನದ ಬೇಡಿಕೆ ಕುಸಿದರೆ ದೇಶದ ಆಮದು ವೆಚ್ಚ ಕಡಿಮೆಯಾಗುತ್ತದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ವೃದ್ಧಿಸಲು ಮತ್ತು ದೇಶದ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಸಹಕಾರಿಯಾಗಲಿದೆ.

ಚಿನ್ನ ಮತ್ತು ಬೆಳ್ಳಿ ಆಮದು ಮಾಡಿಕೊಳ್ಳುವ ಅಧಿಕೃತ ಬ್ಯಾಂಕ್‌ಗಳ ಪಟ್ಟಿ:

ಚಿನ್ನ ಮತ್ತು ಬೆಳ್ಳಿ ಎರಡನ್ನೂ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಟ್ಟು 15 ಬ್ಯಾಂಕ್‌ಗಳಿಗೆ 2029ರವರೆಗೆ ಅಧಿಕಾರ ನೀಡಿದೆ. ಅವುಗಳೆಂದರೆ:

ಎಕ್ಸಿಸ್ ಬ್ಯಾಂಕ್

ಬ್ಯಾಂಕ್ ಆಫ್ ಇಂಡಿಯಾ

ಡ್ಯೂಶೆ ಬ್ಯಾಂಕ್

ಫೆಡರಲ್ ಬ್ಯಾಂಕ್

ಎಚ್​ಡಿಎಫ್​ಸಿ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಇಂಡಸ್​ಇಂಡ್ ಬ್ಯಾಂಕ್

ಇಂಡಿಯನ್ ಓವರ್​ಸೀಸ್ ಬ್ಯಾಂಕ್

ಕೋಟಕ್ ಮಹೀಂದ್ರ ಬ್ಯಾಂಕ್

ಕರೂರ್ ವೈಷ್ಯ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

ಆರ್ಬಿಐ ಬ್ಯಾಂಕ್ (RBL)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಯೆಸ್ ಬ್ಯಾಂಕ್

ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ

ಆಮದು ಮಾಡಿಕೊಳ್ಳಲಾದ ಚಿನ್ನ ಮತ್ತು ಬೆಳ್ಳಿಯನ್ನು ಈ ಬ್ಯಾಂಕ್‌ಗಳು ದೇಶೀಯ ಮಾರುಕಟ್ಟೆಯಲ್ಲಿ ರೀಟೇಲ್ ಕ್ಷೇತ್ರಕ್ಕೆ ಪೂರೈಸುತ್ತವೆ. ಪ್ರಮುಖವಾಗಿ:

ಆಭರಣದಂಗಡಿಗಳಿಗೆ ಕಚ್ಚಾ ಚಿನ್ನ ಪೂರೈಕೆ.

ಗೋಲ್ಡ್ ರಿಫೈನರಿಗಳಿಗೆ ರವಾನೆ.

ದೊಡ್ಡ ಮಟ್ಟದ ರೀಟೇಲ್ ಮಾರಾಟಗಾರರಿಗೆ ಮಾರಾಟ.

ಈ ಪ್ರಕ್ರಿಯೆಯ ಮೂಲಕ ದೇಶದ ಆಭರಣ ಮಾರುಕಟ್ಟೆಗೆ ನಿರಂತರವಾಗಿ ಹೊಸ ಚಿನ್ನ ಮತ್ತು ಬೆಳ್ಳಿಯ ಪೂರೈಕೆಯಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular