ದೂರದ ಪ್ರಯಾಣ ಮಾಡುವಾಗ ಪ್ರತಿಯೊಬ್ಬರೂ ತಮ್ಮ ಪ್ರಯಾಣವು ಆರಾಮದಾಯಕವಾಗಿರಲಿ ಎಂದು ಬಯಸುತ್ತಾರೆ. ಅದರಲ್ಲೂ ಜೊತೆಯಲ್ಲಿ ವೃದ್ಧರು ಅಥವಾ ಸಣ್ಣ ಮಕ್ಕಳಿದ್ದರೆ, ಹೆಚ್ಚಿನವರು ಕೆಳಗಿನ ಸೀಟು (ಲೋಯರ್ ಬರ್ತ್) ಬೇಕೆಂದು ಆಶಿಸುತ್ತಾರೆ.
ಆದರೆ ಎಲ್ಲರಿಗೂ ಲೋಯರ್ ಬರ್ತ್ ಸಿಗುವುದಿಲ್ಲ. ಹೀಗಾಗಿ ವೃದ್ಧರು ಮತ್ತು ಮಹಿಳೆಯರು ಟಿಕೆಟ್ ಬುಕ್ ಮಾಡುವಾಗ ಲೋಯರ್ ಬರ್ತ್ ಪಡೆಯುವುದು ಹೇಗೆ ಎಂಬುದು ತಿಳಿಯುವುದಿಲ್ಲ. ಆದರೆ ಈ ಒಂದು ಕೆಲಸ ಮಾಡಿದರೆ ಸಾಕು, ಸುಲಭವಾಗಿ ಬರ್ತ್ ಲಭಿಸುತ್ತದೆ.
ರೈಲು ಟಿಕೆಟ್ ಬುಕ್ ಮಾಡುವಾಗ ಹೆಚ್ಚಿನವರಿಗೆ ಮಿಡಲ್ ಬರ್ತ್ ಅಥವಾ ಅಪ್ಪರ್ ಬರ್ತ್ ಸಿಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಒಂದು ಸಣ್ಣ ತಪ್ಪು ಮಾಡಿರುತ್ತಾರೆ. ಭಾರತೀಯ ರೈಲ್ವೇ ನಿಯಮಗಳ ಪ್ರಕಾರ, ಹಿರಿಯ ನಾಗರಿಕರು ಮತ್ತು ಮಹಿಳಾ ಪ್ರಯಾಣಿಕರಿಗಾಗಿ ಕೆಳಗಿನ ಬರ್ತ್‌ನಲ್ಲಿ ಒಂದು ನಿರ್ದಿಷ್ಟ ಕೋಟಾವನ್ನು ನಿಗದಿಪಡಿಸಲಾಗಿದೆ. ಈ ಕೋಟಾವು ಸ್ಲೀಪರ್ ಮತ್ತು ಎಸಿ ಕೋಚ್‌ಗಳಿಗೆ ಬೇರೆ ಬೇರೆಯಾಗಿರುತ್ತದೆ.
ಲೋಯರ್ ಬರ್ತ್ ಪಡೆಯುವುದು ಹೇಗೆ ?
- ಪುರುಷ ಪ್ರಯಾಣಿಕನ ವಯಸ್ಸು 60 ವರ್ಷಕ್ಕಿಂತ ಹೆಚ್ಚಿದ್ದರೆ ಅಥವಾ ಮಹಿಳಾ ಪ್ರಯಾಣಿಕರ ವಯಸ್ಸು 58 ವರ್ಷಕ್ಕಿಂತ ಹೆಚ್ಚಿದ್ದರೆ, ಟಿಕೆಟ್ ಬುಕ್ ಮಾಡುವಾಗ ತಪ್ಪದೇ ‘ಸೀನಿಯರ್ ಸಿಟಿಜನ್‘ (Senior Citizen) ಆಯ್ಕೆಯನ್ನು ಆರಿಸಿಕೊಳ್ಳಬೇಕು.
- ಇದರ ಜೊತೆಗೆ, 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಸೀಟ್ ಆದ್ಯತೆಯಲ್ಲಿ (Seat Preference) ಲೋಯರ್ ಬರ್ತ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
- ರೈಲ್ವೇ ನಿಯಮಗಳ ಪ್ರಕಾರ, ಒಂದು PNR ಅಥವಾ ಟಿಕೆಟ್‌ನಲ್ಲಿ ಗರಿಷ್ಠ 1 ಅಥವಾ 2 ಹಿರಿಯ ನಾಗರಿಕರು ಮಾತ್ರ ಲೋಯರ್ ಬರ್ತ್ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
- ಒಂದೇ ಟಿಕೆಟ್‌ನಲ್ಲಿ 4-5 ಮಂದಿ ಹಿರಿಯ ನಾಗರಿಕರಿಗೆ ಟಿಕೆಟ್ ಖರೀದಿಸಿದರೆ, ಎಲ್ಲರಿಗೂ ಲೋಯರ್ ಬರ್ತ್ ಸಿಗುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತವೆ.
- ಒಂದು ವೇಳೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಎಲ್ಲಾ ಲೋಯರ್ ಬರ್ತ್‌ಗಳು ಈಗಾಗಲೇ ಭರ್ತಿಯಾಗಿದ್ದರೆ, ಕೆಳಗಿನ ಸೀಟುಗಳು ಲಭ್ಯವಿರುವುದಿಲ್ಲ.
- ಗರ್ಭಿಣಿಯರಿಗಾಗಿ ವಿಶೇಷ ಕೋಟಾ ಇರುತ್ತದೆ. ಆ ಕೋಟಾ ಭರ್ತಿಯಾದರೆ ಕೆಳಗಿನ ಬರ್ತ್ ಸಿಗುವುದಿಲ್ಲ.
- ಯಾರಾದರೂ ಯಾವುದೇ ಕಾರಣದಿಂದ ತಮ್ಮ ಟಿಕೆಟ್ ರದ್ದುಗೊಳಿಸಿದರೆ (Cancel), ಸಿಸ್ಟಮ್ ಸ್ವಯಂಚಾಲಿತವಾಗಿ ಆ ಲೋಯರ್ ಬರ್ತ್ ಅನ್ನು ಆದ್ಯತೆಯ ಮೇರೆಗೆ ಹಿರಿಯ ನಾಗರಿಕರಿಗೆ ಅಥವಾ ಅರ್ಹರಿಗೆ ನೀಡುತ್ತದೆ.

