HomeLatest Newsಭವಿಷ್ಯ ನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿ ದರ ಶೇ. 7.1ಕ್ಕೆ ನಿಗದಿ

ಭವಿಷ್ಯ ನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿ ದರ ಶೇ. 7.1ಕ್ಕೆ ನಿಗದಿ

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿ 01/01/2026 ರಿಂದ 31/03/2026 ರವರೆಗಿನ ಅವಧಿಗೆ ವಾರ್ಷಿಕ ಶೇ.7.1 ಕ್ಕೆ ನಿಗದಿಪಡಿಸಲಾಗಿದೆ ಎಂದು ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (GPF) ಎಂಬುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿರುವ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಜಿಪಿಎಫ್ ಮೇಲಿನ ಬಡ್ಡಿ ದರವು ವಾರ್ಷಿಕ ಶೇ. 7.1ರಷ್ಟಿದೆ. ನೌಕರರು ತಮ್ಮ ಮೂಲ ವೇತನದ ಶೇಕಡಾವಾರು ಹಣವನ್ನು ಈ ಖಾತೆಗೆ ಜಮಾ ಮಾಡಬೇಕು, ಇದನ್ನು ನಿವೃತ್ತಿಯ ನಂತರ ಒಟ್ಟಾರೆಯಾಗಿ ಪಡೆಯಬಹುದಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular