HomeLifestyleಅನ್ನ ಮಿಕ್ಕಿದ್ದರೆ ಈ ರೀತಿ ಮಾಡಿ ನೋಡಿ ‘ಚಿತ್ರಾನ್ನ’

ಅನ್ನ ಮಿಕ್ಕಿದ್ದರೆ ಈ ರೀತಿ ಮಾಡಿ ನೋಡಿ ‘ಚಿತ್ರಾನ್ನ’

ಬೆಳಿಗ್ಗಿನ ತಿಂಡಿ ಎಷ್ಟು ಸುಲಭದಲ್ಲಿ ಆಗುತ್ತೋ ಅಷ್ಟು ಸಮಯ ಉಳಿಯುತ್ತದೆ. ಇಲ್ಲಿ ಸುಲಭವಾಗಿ ಒಂದು ಚಿತ್ರಾನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು : 2 ಕಪ್ ಅನ್ನ, 2 ಚಮಚ ಎಣ್ಣೆ, 1 ಚಮಚ ಸಾಸಿವೆ, ಐದರಿಂದ ಆರು ಕರಿಬೇವಿನ ಎಲೆ, ಒಂದು ಟೀಸ್ಪೂನ್ ಕಡ್ಲೆಬೇಳೆ, ಚಿಟಿಕೆ ಇಂಗು, ಅರ್ಧ ಚಮಚ ಉದ್ದಿನಬೇಳೆ, 1 ಈರುಳ್ಳಿ, 2 ಚಮಚ ಶೇಂಗಾ, 2 ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆಹಣ್ಣಿನ ರಸ, ಜೀರಿಗೆ ಪುಡಿ, ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು.

 ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆಹಾಕಿ ಸಾಸಿವೆ ಹಾಕಿ ಅದು ಸಿಡಿದಾಗ ಕರಿಬೇವು, ಕಡಲೆಬೇಳೆ, ಇಂಗು, ಉದ್ದಿನಬೇಳೆ ಹಾಕಿ ತುಸು ಫ್ರೈ ಮಾಡಿ ಈರುಳ್ಳಿ ಸೇರಿಸಿ ಇದು ಕೆಂಪಾದ ನಂತರ ಶೇಂಗಾ, ಹಸಿಮೆಣಸಿನಕಾಯಿ ಹಾಕಿ. ಶೇಂಗಾ ತುಸು ಫ್ರೈ ಆದ ಮೇಲೆ ಉಪ್ಪು, ಅನ್ನ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ನಿಂಬೆರಸ, ಜೀರಿಗೆ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular