HomeLatest Newsಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಇವಾಗಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚು ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಅಮ್ಮಂದಿರೂ ಕೂಡ ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕುಳಿತುಕೊಂಡು ಬಿಡುತ್ತಾರೆ. ಊಟಕ್ಕೆ ನಕಾರ ಮಾಡುವ ಮಗು, ಶಾಪಿಂಗ್ ಗೆ ಹೋದಾಗ ಮಾಲ್ ತುಂಬಾ ಓಡಾಡುವ ಮಗುವನ್ನು ಸುಮ್ಮನಿರಿಸುವ ಏಕೈಕ ಉಪಾಯವೆಂದರೆ ಅದು ಮೊಬೈಲ್.

ಎಳೆ ಮಕ್ಕಳು ಕೂಡ ತಮ್ಮ ಪುಟಾಣಿ ಬೆರಳುಗಳನ್ನು ಟಚ್ ಸ್ಟ್ರೀನ್ ಮೇಲೆ ದೊಡ್ಡವರಿಗಿಂತ ಸರಾಗವಾಗಿ ಚಲಾಯಿಸುತ್ತಾರೆ. ಇನ್ನು ಸ್ವಲ್ಪ ದೊಡ್ಡ ಮಕ್ಕಳು ಅದರಲ್ಲಿನ ಗೇಮ್ ಗಳತ್ತ ಆಕರ್ಷಿತರಾಗಿದ್ದಾರೆ. ಇಂತಹ ಮಕ್ಕಳನ್ನು ಇದರಿಂದ ಹೊರಗೆ ತರುವುದಾದರೂ ಹೇಗೆ…? ಇಷ್ಟು ದಿನ ಮೊಬೈಲ್ ಹಿಡಿದ ಕೈ ಪುಸ್ತಕವನ್ನು ಒಲ್ಲೆ ಅನ್ನುತ್ತದೆ. ಆದರೆ ಪೋಷಕರು ಪ್ರಯತ್ನ ಹರಿಸಿದರೆ ಸುಲಭವಾಗಿ ಮಕ್ಕಳನ್ನು ಇದರಿಂದ ಹೊರಗೆ ತರಬಹುದು.

ಮಕ್ಕಳಿಗೆ ಮೊಬೈಲ್ ಮುಟ್ಟಬೇಡ ಎಂದು ಹೇಳಿ ನಾವು ಮೊಬೈಲ್ ಹಿಡಿದು ಕೂತರೆ ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಒಂದಷ್ಟು ಸಮಯ ಓದುವುದಕ್ಕೆಂದು ಮೀಸಲಿಡಿ. ಆ ಸಮಯದಲ್ಲಿ ಮಕ್ಕಳನ್ನು ನಿಮ್ಮೊಂದಿಗೆ ಕುಳ್ಳಿರಿಸಿಕೊಳ್ಳಿ. ಚೆಂದ ಚೆಂದದ ಕತೆ ಪುಸ್ತಕಗಳನ್ನು ಅವರಿಗೆ ಗಿಫ್ಟ್ ಕೊಡಿ. ಅವರು ಓದುವಾಗ ನೀವು ಕೂಡ ಅವರ ಜತೆ ಸೇರಿ. ಪಂಚತಂತ್ರ, ಮಕ್ಕಳ ರಾಮಾಯಣ ಪುಸ್ತಕಗಳನ್ನು ಅವರಿಗೆ ಪರಿಚಯಿಸಿ. ಎಳೆ ಮನಸ್ಸಿಗೆ ಓದಿನ ರುಚಿ ಹತ್ತಿಸಿ ನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular