ಹುಬ್ಬಳ್ಳಿಯ ವಾಹನ ಸವಾರರ ಗಮನಕ್ಕೆ ಪ್ರಮುಖವಾದ ಮಾಹಿತಿ ಇದೆ. ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ದಿನಾಂಕ 16.02.2026 ರಂದು ಬೆಳಗ್ಗೆ 11 ಗಂಟೆಯಿಸಿದ ರಾತ್ರಿ 23:30 ಗಂಟೆಯವರೆಗೆ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯಲಿದೆ.
ಆದ್ದರಿಂದ ತಾತ್ಕಾಲಿಕವಾಗಿ ವಾಹನಗಳ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ. ಜನರು, ವಾಹನ ಸವಾರರು ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
- ಕಾರವಾರ ರೋಡ್, ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ವಾಹನಗಳು ಬೈಪಾಸ್ ಮಾರ್ಗವಾಗಿ ತಾರಿಹಾಳ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಹುಬ್ಬಳ್ಳಿ ಶಹರ ಪ್ರವೇಶ ಮಾಡಲು ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
- ಎಂ.ಟಿ.ಮಿಲ್ಲ ಕ್ರಾಸ್ ಕಡೆಯಿಂದ ಇಂಡಿಪಂಪ್ ಸರ್ಕಲ್ ಕಡೆಗೆ ಬರುವ ವಾಹನಗಳು ಚಟ್ನಿ ಮಠ ಕ್ರಾಸ್, ಕಮರಿಪೇಟ್ ಪಿ.ಎಸ್ ಕ್ರಾಸ್, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪೂರ ಚೌಕ, ಗಬ್ಬೂರ ಮಾರ್ಗವಾಗಿ ಹೋಗುವುದು ಅಥವಾ ವಾಣಿ ವಿಲಾಸ ಸರ್ಕಲ್ ಮುಖಾಂತರ ಗೋಕುಲ ರೋಡ್ ಮುಖಾಂತರ ಬೈಪಾಸ್ ಹೋಗಲು ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
- ನ್ಯೂ ಇಂಗ್ಲೀಷ್ ಸ್ಕೂಲ್ ಕ್ರಾಸ್ ಕಡೆಯಿಂದ ಇಂಡಿ ಪಂಪ್ ಸರ್ಕಲ್ ಕಡೆಗೆ ಬರುವ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿರುತ್ತದೆ.
- ಅಕ್ಷಯ ಪಾರ್ಕ್ ಸರ್ಕಲ್ ಕಡೆಯಿಂದ ಮುರುಡೇಶ್ವರ ಫ್ಯಾಕ್ಟರಿ ಕಡೆಗೆ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿರುತ್ತದೆ.
- ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯುವ ಕಾಲಕ್ಕೆ ತಾತ್ಕಾಲಿಕವಾಗಿ ವಾಹನಗಳು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
- ಸಿದ್ಧಾರೂಢ ಮಠಕ್ಕೆ ಜಾತ್ರೆಗೆ ಬರುವ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಇತರೇ ವಾಹನಗಳಿಗೆ ಸಿದ್ಧಾರೂಢ ಮಠದ ಸುತ್ತ ಮುತ್ತಲು ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
- ಹೆಚ್ಚಿನ ವಾಹನ ದಟ್ಟಣೆಯಾದಲ್ಲಿ ಅನುಕೂಲಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆಯನ್ನು ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

