HomeUncategorizedಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ನಾಯಂಡಹಳ್ಳಿಯಲಿ 4 ರೈಲುಗಳು ನಿಲುಗಡೆ

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ನಾಯಂಡಹಳ್ಳಿಯಲಿ 4 ರೈಲುಗಳು ನಿಲುಗಡೆ

ಬೆಂಗಳೂರು: ಬೆಂಗಳೂರು ಹಾಗೂ ವಿಶಾಖಪಟ್ಟಣ ವಿಶೇಷ ರೈಲು ಸಂಚಾರವನ್ನು ಹೋಳಿಹಬ್ಬದ ಹಿನ್ನೆಲೆಯಲ್ಲಿ ವಿಸ್ತರಿಸಲಾಗಿದೆ.

ಹೋಳಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಎಸ್​ಎಂವಿಟಿ ಬೆಂಗಳೂರು-ವಿಶಾಖಪಟ್ಟಣ ನಡುವಿನ ವಿಶೇಷ ರೈಲು ಮಾರ್ಚ್​​ 30 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ವೇಳೆ ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ರಮುಖ ನಾಲ್ಕು ರೈಲುಗಳಿಗೆ ನಿಲುಗಡೆ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 08581 ಬೆಂಗಳೂರು ಕಡೆಗೆ ಬರುವ ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್‌ಪ್ರೆಸ್‌ (ಭಾನುವಾರ ಸಂಚಾರ) ಅನ್ನು ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ಸಂಖ್ಯೆ 08582 ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್‌ಪ್ರೆಸ್‌ ಮಾರ್ಚ್ 30ರವರೆಗೆ ಸಂಚರಿಸಲಿದೆ.

ನಾಯಂಡಹಳ್ಳಿಯಲ್ಲಿ 4 ರೈಲುಗಳು ನಿಲುಗಡೆ:
ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ರೈಲುಗಳಿಗೆ ಪ್ರಯೋಗಾತ್ಮಕವಾಗಿ ಒಂದು ನಿಮಿಷದ ನಿಲುಗಡೆ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 16215 ಮೈಸೂರು-ಕೆಎಸ್‌ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಬೆಳಿಗ್ಗೆ 8.45ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 16216 ಕೆಎಸ್‌ಆರ್ ಬೆಂಗಳೂರು–ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ ಸಂಜೆ 6.39ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 3.16ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ಬೆಳಿಗ್ಗೆ 8.19ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 16235 ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 6.49ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 16236 ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರಾತ್ರಿ 8.14ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 16535 ಮೈಸೂರು-ಫಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಸಂಜೆ 5.40ಕ್ಕೆ ಆಗಮಿಸುತ್ತದೆ.
ರೈಲು ಸಂಖ್ಯೆ 16536 ಫಂಡರಾಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಬೆಳಿಗ್ಗೆ 7.44ಕ್ಕೆ ಆಗಮಿಸುತ್ತದೆ.

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular