HomeLatest Newsಬೆಳಗ್ಗಿನ ಉಪಹಾರದಲ್ಲಿ ಪ್ರೋಟೀನ್ ಕೊರತೆಯೇ? ನಿಮ್ಮ ಸಾಧಾರಣ ಅವಲಕ್ಕಿಯನ್ನು ಸೂಪರ್ ಮೀಲ್ ಆಗಿ ಬದಲಿಸಿ

ಬೆಳಗ್ಗಿನ ಉಪಹಾರದಲ್ಲಿ ಪ್ರೋಟೀನ್ ಕೊರತೆಯೇ? ನಿಮ್ಮ ಸಾಧಾರಣ ಅವಲಕ್ಕಿಯನ್ನು ಸೂಪರ್ ಮೀಲ್ ಆಗಿ ಬದಲಿಸಿ

ಬೆಂಗಳೂರು: ಬೆಳಿಗ್ಗೆ ಎದ್ದ ತಕ್ಷಣ ಬಹುತೇಕರ ಮನೆಯಲ್ಲಿ ಕಾಮನ್ ಆಗಿ ಮಾಡೋ ತಿಂಡಿ ಅಂದ್ರೆ ಅದು ಅವಲಕ್ಕಿ ಅಥವಾ ಪೋಹಾ. ಮಾಡೋದು ಸುಲಭ, ತಿನ್ನೋಕು ರುಚಿ. ಆದ್ರೆ ನಿಮಗೊಂದು ವಿಷಯ ಗೊತ್ತಾ? ನಾವು ದಿನಾ ತಿನ್ನೋ ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುತ್ತೆ ಹೊರತು ಪ್ರೋಟೀನ್ ಅಂಶ ತೀರಾ ಕಮ್ಮಿ. ಕೆಲಸದ ಒತ್ತಡದ ನಡುವೆ ದಿನವಿಡೀ ಚೈತನ್ಯದಿಂದ ಇರಬೇಕಾದ್ರೆ ದೇಹಕ್ಕೆ ಪ್ರೋಟೀನ್ ಅತಿ ಮುಖ್ಯ.

ಸಸ್ಯಾಹಾರಿಗಳಿಗೆ ಪ್ರೋಟೀನ್ ಸಿಗೋದು ಕಷ್ಟ ಅನ್ನೋ ಮಾತನ್ನ ಈಗ ಪ್ರಸಿದ್ಧ ಫುಡ್ ಬ್ಲಾಗರ್ ಕೀರ್ತಿ (@thevegetarianladki) ಸುಳ್ಳು ಮಾಡಿದ್ದಾರೆ. ಕೇವಲ 260 ಕ್ಯಾಲೋರಿ ಹೊಂದಿರುವ, ಬರೋಬ್ಬರಿ 16 ಗ್ರಾಂ ಪ್ರೋಟೀನ್ ನೀಡುವ ಹೈ-ಪ್ರೋಟೀನ್ ಅವಲಕ್ಕಿ ರೆಸಿಪಿಯನ್ನು ಅವರು ಹಂಚಿಕೊಂಡಿದ್ದಾರೆ.

https://www.instagram.com/reel/DU5cG8qkhy-/?utm_source=ig_web_copy_link

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೋಟೀನ್ ಯಾಕೆ ಅಷ್ಟೊಂದು ಇಂಪಾರ್ಟೆಂಟ್?


ಪ್ರೋಟೀನ್ ಅಂದ ಕೂಡಲೇ ಜಿಮ್‌ಗೆ ಹೋಗೋರು ಮಾತ್ರ ತಿನ್ನಬೇಕು ಅಂತ ಅನ್ಕೋಬೇಡಿ. ನಮ್ಮ ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದು ಪ್ರತಿಯೊಬ್ಬರಿಗೂ ಬೇಕು. ಬೆಳಗಿನ ತಿಂಡಿಯಲ್ಲಿ ಪ್ರೋಟೀನ್ ಹೆಚ್ಚಿದ್ದರೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಪದೇ ಪದೇ ಹಸಿವಾಗೋದು ಕಡಿಮೆಯಾಗಿ ತೂಕ ಇಳಿಸಿಕೊಳ್ಳಲು (Weight Loss) ಇದು ಹೇಳಿ ಮಾಡಿಸಿದ ತಿಂಡಿ.

ಏನಿದು ದಿ ವೆಜಿಟೇರಿಯನ್ ಲಡ್ಕಿ ಕೀರ್ತಿ ಅವರ ಸ್ಪೆಷಲ್ ರೆಸಿಪಿ?


ಫೆಬ್ರವರಿ 18 ರಂದು ಕೀರ್ತಿ ಅವರು ಹಂಚಿಕೊಂಡಿರುವ ಈ ರೆಸಿಪಿಯಲ್ಲಿ ಪ್ರೋಟೀನ್ ಮಾತ್ರವಲ್ಲದೆ, ನಾರಿನಂಶ (Fiber) ಮತ್ತು ಉತ್ತಮ ಕೊಬ್ಬಿನಂಶದ ಸಮತೋಲನವಿದೆ. ಈ ರೆಸಿಪಿ ಇಬ್ಬರಿಗೆ ಸಾಕಾಗುವಷ್ಟಿದೆ.

ಬೇಕಾಗುವ ಸಾಮಗ್ರಿಗಳು:


ಮೇನ್ ಪ್ರೋಟೀನ್ ಮೂಲ: ಮೊಳಕೆ ಬಂದ ಹೆಸರುಕಾಳು (70 ಗ್ರಾಂ), ಬೇಯಿಸಿದ ಹಸಿ ಬಟಾಣಿ (70 ಗ್ರಾಂ), ಪನೀರ್ ತುಂಡುಗಳು (100 ಗ್ರಾಂ).

ಅವಲಕ್ಕಿ ಬೇಸ್: 1 ಕಪ್ ನೆನೆಸಿದ ಅವಲಕ್ಕಿ, ಉಪ್ಪು, ಸ್ವಲ್ಪ ಬೆಲ್ಲ ಅಥವಾ ತೆಂಗಿನ ಸಕ್ಕರೆ.

ಒಗ್ಗರಣೆಗೆ: ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಕ್ಯಾಪ್ಸಿಕಂ.

ಮಸಾಲೆ: ಅರಿಶಿನ, ಖಾರದ ಪುಡಿ, ಚಾಟ್ ಮಸಾಲಾ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ (Quick Steps):


ಸಿದ್ಧತೆ: ಮೊದಲು ಅವಲಕ್ಕಿಯನ್ನು ತೊಳೆದು, ಅದಕ್ಕೆ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ.

ಒಗ್ಗರಣೆ: ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ.

ಪ್ರೋಟೀನ್ ಮಿಕ್ಸ್: ಈಗ ಮೊಳಕೆ ಕಾಳು ಮತ್ತು ಬಟಾಣಿ ಸೇರಿಸಿ 2 ನಿಮಿಷ ಬೇಯಿಸಿ. ನಂತರ ಪನೀರ್ ತುಂಡುಗಳು ಮತ್ತು ಮಸಾಲೆ ಪುಡಿಗಳನ್ನು ಹಾಕಿ ಮೆಲ್ಲಗೆ ಕೈಯಾಡಿಸಿ.

ಫೈನಲ್ ಟಚ್: ಕೊನೆಯಲ್ಲಿ ನೆನೆಸಿಟ್ಟ ಅವಲಕ್ಕಿ ಹಾಕಿ ಚೆನ್ನಾಗಿ ಕಲಸಿ. ಮೇಲೆ ಸ್ವಲ್ಪ ನಿಂಬೆ ರಸ ಮತ್ತು ತಾಜಾ ಕೊತ್ತಂಬರಿ ಸೊಪ್ಪು ಉದುರಿಸಿದರೆ ಗಮಗಮಿಸುವ ಪೌಷ್ಟಿಕ ಅವಲಕ್ಕಿ ಸಿದ್ಧ

ಡಯಟ್ ಅಂದ್ರೆ ಬರಿ ಹಸಿವು ತಡೆಯೋದಲ್ಲ, ದೇಹಕ್ಕೆ ಬೇಕಾದ ಪೌಷ್ಟಿಕಾಂಶ ನೀಡುವುದು. ಇವತ್ತೇ ನಿಮ್ಮ ಅಡುಗೆ ಮನೆಯಲ್ಲಿ ಈ ಹೆಲ್ದಿ ಅವಲಕ್ಕಿ ಟ್ರೈ ಮಾಡಿ ನೋಡಿ. ನಿಮ್ಮ ಫಿಟ್ನೆಸ್ ಜರ್ನಿಗೆ ಇದೊಂದು ಬೆಸ್ಟ್ ಸ್ಟಾರ್ಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular