ಬೆಂಗಳೂರು: 60 ವರ್ಷದ ಪತಿಯ ವಿರುದ್ಧ 60 ವರ್ಷದ ಪತ್ನಿಯ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಪತ್ನಿ ದಾಖಲಿಸಿದ್ದರು.
ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪತಿ ವೆಂಕಟರಮಣ ಹೆಗಡೆ ಅರ್ಜಿ ಸಲ್ಲಿಸಿದ್ದರು. ಪತಿ ಮೇಲಿನ ಅನುಮಾನದಿಂದ ಕೇಸು ದಾಖಲಿಸಿದ್ದಾರೆ ಎಂದು ವಾದ ಮಂಡಿಸಲಾಗಿತ್ತು. ಪತಿ ವೆಂಕಟರಮಣ ಹೆಗಡೆ ಪರ ವಕೀಲರು ವಾದ ಮಂಡಿಸಿದ್ದರು.. ದಂಪತಿಗೆ 33 ಹಾಗೂ 30 ವರ್ಷದ ಇಬ್ಬರು ಮಕ್ಕಳಿದ್ದಾರೆ.
25 ಪುಟದ ದೂರಿನಲ್ಲಿ ಪ್ರೀತಿಸಿ ಮದುವೆಯಾದ ನಂತರದ ವಿವರವನ್ನು ಪತ್ನಿ ನೀಡಿದ್ದಾರೆ. ದಕ್ಷಿಣ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ಕಾನೂನಿನ ಪ್ರಕ್ರಿಯೆಯ ದುರುಪಯೋಗವೆಂದು ಹೈಕೋರ್ಟ್ ಹೇಳಿದೆ. ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.

