ಬೆಂಗಳೂರು: ರಾಜ್ಯದಲ್ಲಿ ಒಟ್ಟು 29,679 ಕೋಟಿ ರೂ. ಬಂಡವಾಳ ಹೂಡಿಕೆಯ 9 ಹೊಸ ಹಾಗೂ 8 ಹೆಚ್ಚುವರಿ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು ಇಂತಿವೆ.
ಒಟ್ಟು ₹29,679 ಕೋಟಿ ಬಂಡವಾಳ ಹೂಡಿಕೆಯ 9 ಹೊಸ ಹಾಗೂ 8 ಹೆಚ್ಚುವರಿ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ
ಈ ಎಲ್ಲಾ ಯೋಜನೆಗಳ ಮೂಲಕ ರಾಜ್ಯದ ಯುವಜನತೆಗಾಗಿ ಒಟ್ಟು 66,360 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
ಹೊಸ ಹೂಡಿಕೆಗಳು ಮತ್ತು ಉದ್ಯೋಗಗಳು: ಹೀರೋ ಫ್ಯೂಚರ್ ಎನರ್ಜೀಸ್ (₹9,760 ಕೋಟಿ – 3,200 ಉದ್ಯೋಗ), ನಿರಾಣಿ ಶುಗರ್ಸ್ (₹4,062 ಕೋಟಿ), ಟ್ರೂಆಲ್ಟ್ ಬಯೋ ಎನರ್ಜಿ (₹2,988 ಕೋಟಿ), ಮಹೀಂದ್ರ ಏರೋಸ್ಟ್ರಕ್ಚರ್ಸ್ (₹2,300 ಕೋಟಿ – 3,000 ಉದ್ಯೋಗ), ವೈಬ್ರನ್ಸಿ ರಿನ್ಯೂವೇಬಲ್ ಎನರ್ಜೀಸ್ (₹2,194.94 ಕೋಟಿ – 30,000 ಉದ್ಯೋಗ), ಎಪ್ಸಿಲಾನ್ (₹1,500 ಕೋಟಿ), ಟೊಯೋಟಾ ಕಿರ್ಲೋಸ್ಕರ್ (₹1,200 ಕೋಟಿ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ (₹1,104 ಕೋಟಿ – 4,813 ಉದ್ಯೋಗ), ಲೈಟ್‌ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ (₹600 ಕೋಟಿ).
ಹೆಚ್ಚುವರಿ ಬಂಡವಾಳ ಹೂಡಿಕೆಗಳು: ಟಿವಿಎಸ್ ಮೋಟರ್ಸ್ (₹1,050 ಕೋಟಿ), ಎಂಎಸ್‌ಪಿಎಲ್ (₹884.25 ಕೋಟಿ), ಭೀಮಾ ಫೈನ್ ಕೆಮಿಕಲ್ಸ್ (₹605 ಕೋಟಿ), ಸನ್ಸೇರಾ (₹492.24 ಕೋಟಿ), ಹೋಂಡಾ ಕಾರ್ಸ್ (₹437 ಕೋಟಿ), ಎನ್‌ಶ್ಯೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ (₹250 ಕೋಟಿ), ಹ್ಯಾವೆಲ್ಸ್ ಇಂಡಿಯಾ (₹250 ಕೋಟಿ).
ಪಾರದರ್ಶಕತೆಗೆ ಆಡಿಟ್ ಕಡ್ಡಾಯ: ಕೈಗಾರಿಕೆಗಳಿಗೆ ಪರವಾನಗಿ ನೀಡುವ ಪೂರ್ವದಲ್ಲಿ ಪ್ರಾಜೆಕ್ಟ್ ರಿಪೋರ್ಟ್‌ಗಳ ಸಮಗ್ರ ಪರಿಶೀಲನೆ ನಡೆಸಲು ಹಾಗೂ ಕಡ್ಡಾಯ ಆಡಿಟ್‌ಗಾಗಿ ಹೊಸ ಆಡಿಟ್ ತಂಡ ರಚಿಸಲು ಹಣಕಾಸು ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಕೈಗಾರಿಕಾ ವಿಸ್ತರಣೆಗೆ ಬೆಂಬಲ: ನೂತನ ಕೈಗಾರಿಕಾ ನೀತಿಯ ಎಲ್ಲಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ, ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಹಳೆಯ ಘಟಕಗಳ ವಿಸ್ತರಣೆಗೆ ಪೂರ್ಣ ಸಹಕಾರ ನೀಡಲು ನಿರ್ದೇಶನ.
ಗೃಹಕಚೇರಿ ಕೃಷ್ಣಾದಲ್ಲಿ ನಡೆದ 68ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದರು. ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

