HomeHealthಮಳೆಯಲ್ಲಿ ಕಾಡುವ ಕಾಲಿನ ಕೆಸರು ಹುಣ್ಣಿಗೆ ಇಲ್ಲಿದೆ ಸುಲಭದ ಮನೆ ಮದ್ದು

ಮಳೆಯಲ್ಲಿ ಕಾಡುವ ಕಾಲಿನ ಕೆಸರು ಹುಣ್ಣಿಗೆ ಇಲ್ಲಿದೆ ಸುಲಭದ ಮನೆ ಮದ್ದು

ಮಳೆಗಾಲ ಎಂದರೆ ಗಿಜಿಗುಡುವ ವಾತಾವರಣ. ಈ ವೇಳೆ ನಮ್ಮ ಕಾಲುಗಳು ಸಾಮಾನ್ಯವಾಗಿ ಒದ್ದೆಯಾಗೆ ಇರುತ್ತದೆ. ಹೊರಗೆ ಹೆಚ್ಚಾಗಿ ತಿರುಗಾಡುವ ಜನರಿಗಂತೂ ಕಾಲನ್ನು ಶುಚಿಯಾಗಿ ಇಡುವುದು ಸವಾಲಿನ ಕೆಲಸವೇ ಸರಿ.

ಸದಾ ಒದ್ದೆಯಾದ ಕಾಲಿಗೆ ಕೆಸರು ಹುಣ್ಣು ಆಗುವುದು ಸರ್ವೇ ಸಾಮಾನ್ಯ. ಈ ಕಾಡುವ ಕೆಸರು ಹುಣ್ಣಿಗೆ ದುಬಾರಿ ಕ್ರೀಮ್ ಲೇಪಿಸುವ ಅವಶ್ಯಕತೆ ಇಲ್ಲ.

ಮನೆಯಲ್ಲಿ ಸಿಗುವ ಕೇವಲ ಎರಡೇ ವಸ್ತುವಿನಿಂದ ಕೆಸರು ಹುಣ್ಣಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು.
ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದು ಒರೆಸಿ, ನಂತರ ಎರಡು ಚಮಚ ಶುದ್ಧ ತೆಂಗಿನ ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಕಾಲು ಬೆರಳುಗಳ ನಡುವೆ ಹಚ್ಚುತ್ತಾ ಬಂದರೆ ಕೆಸರು ಹುಣ್ಣು ತಂತಾನೇ ಮಾಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular