HomeLatest NewsBREAKING: ಹೀಟ್ ಸ್ಟ್ರೋಕ್ ಗೆ ಮತ್ತೋರ್ವ ವ್ಯಕ್ತಿ ಬಲಿ

BREAKING: ಹೀಟ್ ಸ್ಟ್ರೋಕ್ ಗೆ ಮತ್ತೋರ್ವ ವ್ಯಕ್ತಿ ಬಲಿ

ಬೆಳಗಾವಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದ್ದರೂ ತಾಪಮಾನ ಮಾತ್ರ ಕಡಿಮೆಯಾಗಿಲ್ಲ. ಬಿಸಿಲ ಝಳ, ಹೀಟ್ ಸ್ಟ್ರೋಕ್ ನಿಂದಾಅಗಿ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ರಣ ಬಿಸಿಲು, ಬಿಸಿ ಗಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲ ಝಳದಿಂದ ಕುಸಿದು ಬಿದ್ದ ವ್ಯಾಪಾರಿಯೊಬ್ಬರು ಹೀಟ್ ಸ್ಟ್ರೋಕ್ ನಿಂದ ಮೃತಪಟ್ಟಿದ್ದಾರೆ. ಉಗಾರ ಖುರ್ದ ಪಟ್ಟಣದ ವಾರದ ಸಂತೆಯಲ್ಲಿ ಈ ಘಟನೆ ನಡೆದಿದ್ದು, ವರ್ಧಮಾನ ಮಗದುಮ ಮೃತ ದುರ್ದೈವಿ.

ಸಂತೆಯಲ್ಲಿ ವ್ಯಾಪಾರದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ವರ್ಧಮಾನ ಅವರನ್ನು ಕೂಡಲೇ ಆಸ್ಪತ್ರೆಯಗೆ ಸಾಗಿಸಲಾಅಯಿತು. ಆದರೆ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular