HomeInternationalವಿಮಾನದಲ್ಲಿ ಸಂಸದೆ ಮಹುವಾ ಮೊಯಿತ್ರಾಗೆ ಕಿರುಕುಳ: ಜೈ ಶ್ರೀರಾಮ್ ಘೋಷಣೆ ಕೂಗಿ ಅನುಚಿತ ವರ್ತನೆ

ವಿಮಾನದಲ್ಲಿ ಸಂಸದೆ ಮಹುವಾ ಮೊಯಿತ್ರಾಗೆ ಕಿರುಕುಳ: ಜೈ ಶ್ರೀರಾಮ್ ಘೋಷಣೆ ಕೂಗಿ ಅನುಚಿತ ವರ್ತನೆ

ದೆಹಲಿಗೆ ಪ್ರಯಾಣಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಇಂಡಿಗೋ ವಿಮಾನದಲ್ಲಿ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ಸಂಸದೆಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಮಹುವಾ ಮೊಯಿತ್ರಾ ಅವರು ಗುರುವಾರ ಇಂಡಿಗೋ ವಿಮಾನದ ಮೂಲಕ ದೆಹಲಿಗೆ ತೆರಳುತ್ತಿದ್ದರು. ಈ ವೇಳೆ ವಿಮಾನದೊಳಗೆ ಕೆಲವು ವ್ಯಕ್ತಿಗಳು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಸದರು ನೀಡಿರುವ ಮಾಹಿತಿಯ ಪ್ರಕಾರ, ಅವರು ವಿಮಾನದ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಾಗ ನಾಲ್ಕೈದು ಜನರ ಗುಂಪೊಂದು ಅವರನ್ನು ಕೆಟ್ಟದಾಗಿ ದಿಟ್ಟಿಸುತ್ತಾ ವಿಮಾನದ ಹಿಂಭಾಗಕ್ಕೆ ತೆರಳಿದೆ. ವಿಮಾನ ದೆಹಲಿಯಲ್ಲಿ ಇಳಿದ ಬಳಿಕ, ಬಾಗಿಲು ತೆರೆಯುವ ಮೊದಲೇ ಈ ವ್ಯಕ್ತಿಗಳು ಸಂಸದೆಯ ಸಮೀಪ ಬಂದು ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಅವರತ್ತ ತಿರುಗಿ ಜೈ ಶ್ರೀರಾಮ್ ಹಾಗೂ ತೃಣಮೂಲ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೊಂದು ವ್ಯವಸ್ಥಿತ ಕಿರುಕುಳ ಮತ್ತು ವಿಮಾನದೊಳಗಿನ ಭದ್ರತಾ ವೈಫಲ್ಯ ಎಂದು ಮಹುವಾ ಮೊಯಿತ್ರಾ ಕಿಡಿಕಾರಿದ್ದಾರೆ. ಕೇವಲ ರಾಜಕೀಯ ವಿರೋಧದ ಹೆಸರಿನಲ್ಲಿ ವಿಮಾನದೊಳಗೆ ಇಂತಹ ವರ್ತನೆ ತೋರುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಯು ಕೂಡಲೇ ತನ್ನ ಸಿಬ್ಬಂದಿಯ ವರದಿಯನ್ನು ಪರಿಶೀಲಿಸಬೇಕು ಮತ್ತು ಕಿರುಕುಳ ನೀಡಿದವರನ್ನು ಗುರುತಿಸಿ ಅವರನ್ನು ವಿಮಾನ ಪ್ರಯಾಣ ನಿಷೇಧಿತ ಪಟ್ಟಿಗೆ (ನೋ ಫ್ಲೈ ಲಿಸ್ಟ್) ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೂ ಮನವಿ ಮಾಡಲಾಗಿದ್ದು, ವಿರೋಧ ಪಕ್ಷದ ಪ್ರಮುಖ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular