HomeEntertainment'ಶಾಂತಂ ಪಾಪಂ' ನಲ್ಲಿ ದರ್ಶನ್ ಕಥೆ ಬಂತೇ..? : ಏನಿದು ‘ಡೇರ್ ಡೆವಿಲ್ ದೇವದಾಸ್’ ಕಹಾನಿ..!

‘ಶಾಂತಂ ಪಾಪಂ’ ನಲ್ಲಿ ದರ್ಶನ್ ಕಥೆ ಬಂತೇ..? : ಏನಿದು ‘ಡೇರ್ ಡೆವಿಲ್ ದೇವದಾಸ್’ ಕಹಾನಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಗೆ ಸಂಬಂಧಿಸಿದ ವಿಷಯಗಳನ್ನೇ ಇಟ್ಟುಕೊಂಡು ಸಿನಿಮಾ ಟೈಟಲ್ ನೋಂದಣಿ ಮಾಡಿಸಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ. ಇದರ ನಡುವೆ ಧಾರಾವಾಹಿಯಲ್ಲೂ ದರ್ಶನ್ ಗೆ ಸಂಬಂಧಿಸಿದ ಕಥೆ ಬರುತ್ತಿದೆ.

ಹೌದು, ದರ್ಶನ್ & ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಕತೆ ಇಟ್ಟುಕೊಂಡು ಸಿನಿಮಾ ಮಾಡಲು ಹಲವರು ಆಸಕ್ತಿ ತೋರಿಸುತ್ತಿದ್ದಾರೆ. ಇದರ ನಡುವೆ ಕಿರುತೆರೆ ಶೋ ಶಾಂತಂ ಪಾಪಂ ನಲ್ಲಿ ದರ್ಶನ್ ಕಥೆಯನ್ನೇ ಹೋಲುವ ಎಪಿಸೋಡ್ ಪ್ರಸಾರವಾಗುತ್ತಿದೆ. ಸದ್ಯ ರಿಲೀಸ್ ಆದ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ.

ಡೇರ್ ಡೆವಿಲ್ ದೇವದಾಸ್ ಎಪಿಸೋಡ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಹೋಲುತ್ತದೆ. ಒಂದು ಊರಲ್ಲಿ ದಾಸ್ ಎಂಬ ಒಬ್ಬ ಶ್ರೀಮಂತನಿರುತ್ತಾನೆ, ನಂತರ ಆತ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾನೆ. ಈಗಾಗಲೇ ಮದುವೆ ಆಗಿ ಒಂದೊಳ್ಳೆ ಸಂಸಾರ ನಡೆಸುತ್ತಿದ್ರೂ ಓರ್ವ ನಟಿಯ ಮೋಹದ ಬಲೆಗೆ ಬೀಳುತ್ತಾನೆ. ಆ ನಟಿಗೆ ಓರ್ವ ವ್ಯಕ್ತಿಯೋರ್ವ ಅಶ್ಲೀಲ ಮೆಸೇಜ್ ಮಾಡಿ ತೊಂದರೆ ಕೊಡಲು ಶುರು ಮಾಡುತ್ತಾನೆ. ಇದರಿಂದ ನೊಂದ ನಟಿ ಈ ವಿಚಾರವನ್ನು ದಾಸ್ ನ ಮುಂದಿಡುತ್ತಾನೆ. ಇದರಿಂದ ಕೆರಳಿದ ದಾಸ್ ಆತನನ್ನು ಶೆಡ್ ವೊಂದಕ್ಕೆ ಕರೆತಂದು ಕೊಲೆ ಮಾಡುತ್ತಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಥೆ ಹೊಂದಿರುವ ಪ್ರೋಮೊ ಸಖತ್ ವೈರಲ್ ಆಗುತ್ತಿದೆ. ಪ್ರೋಮೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಡೌಟೇ ಇಲ್ಲ ಇದು ಪಕ್ಕಾ ರೇಣುಕಾ ಸ್ವಾಮಿ ಕಥೆಯೇ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular