HomeLatest NewsJOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ; 'CRPF' ನಲ್ಲಿ 9,195 ಕಾನ್ಸ್ಟೇಬಲ್...

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘CRPF’ ನಲ್ಲಿ 9,195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಭಾರಿ ಪ್ರಮಾಣದಲ್ಲಿ ಕಾನ್‌ಸ್ಟೆಬಲ್ (ಟ್ರೇಡ್ಸ್‌ಮ್ಯಾನ್ ಮತ್ತು ಟೆಕ್ನಿಕಲ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 9 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿದ್ದು, ಏಪ್ರಿಲ್ 20 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಪ್ಯಾರಾಮಿಲಿಟರಿ ಪಡೆಗಳಿಗೆ ಸೇರಿ ದೇಶ ಸೇವೆ ಮಾಡಬಯಸುವ ಯುವಕರಿಗೆ ಇದು ಸುವರ್ಣಾವಕಾಶ. 10ನೇ ತರಗತಿ ಪಾಸ್ ಆಗಿ, ಐಟಿಐ (ITI) ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳು ಸಿಆರ್‌ಪಿಎಫ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ: 9,195
    • ಕಾನ್‌ಸ್ಟೆಬಲ್ (ಟ್ರೇಡ್ಸ್‌ಮ್ಯಾನ್ ಮತ್ತು ಟೆಕ್ನಿಕಲ್): 9,175 ಹುದ್ದೆಗಳು
    • ಪಯೋನೀರ್ ವಿಂಗ್ (ಮೇಸನ್/ಎಲೆಕ್ಟ್ರಿಷಿಯನ್): 20 ಹುದ್ದೆಗಳು

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆ: ಏಪ್ರಿಲ್ 8, 2026
  • ಆನ್‌ಲೈನ್ ಅರ್ಜಿ ಆರಂಭ: ಏಪ್ರಿಲ್ 20, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 19, 2026

ಅರ್ಹತೆ ಮತ್ತು ವಯೋಮಿತಿ:

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಡ್ರೈವರ್: 10ನೇ ತರಗತಿ ಉತ್ತೀರ್ಣ ಮತ್ತು ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಇರಬೇಕು. (ವಯಸ್ಸು: 21–27 ವರ್ಷ)
  • ಮೋಟಾರ್ ಮೆಕಾನಿಕ್: 10ನೇ ತರಗತಿ + ಐಟಿಐ + ಸಂಬಂಧಿತ ಅನುಭವ. (ವಯಸ್ಸು: 18–23 ವರ್ಷ)
  • ಇತರ ಟ್ರೇಡ್ಸ್: 10ನೇ ತರಗತಿ ಉತ್ತೀರ್ಣ ಮತ್ತು ಆಯಾ ಕೆಲಸದಲ್ಲಿ ನೈಪುಣ್ಯತೆ. (ವಯಸ್ಸು: 18–23 ವರ್ಷ)
  • ಪಯೋನೀರ್ ಹುದ್ದೆಗಳು: 10ನೇ ತರಗತಿ + ಅನುಭವ (ಐಟಿಐ ಇದ್ದವರಿಗೆ ಆದ್ಯತೆ). (ವಯಸ್ಸು: 18–23 ವರ್ಷ) (ಸೂಚನೆ: ಸರ್ಕಾರದ ನಿಯಮದಂತೆ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.)

ಆಯ್ಕೆ ಪ್ರಕ್ರಿಯೆ:

ಅಂತಿಮ ಮೆರಿಟ್ ಪಟ್ಟಿಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ.

  1. ದೈಹಿಕ ಸಾಮರ್ಥ್ಯ ಪರೀಕ್ಷೆ (PET)
  2. ದೈಹಿಕ ಗುಣಮಟ್ಟ ಪರೀಕ್ಷೆ (PST)
  3. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  4. ಟ್ರೇಡ್ / ಸ್ಕಿಲ್ ಟೆಸ್ಟ್
  5. ದಾಖಲೆಗಳ ಪರಿಶೀಲನೆ
  6. ವೈದ್ಯಕೀಯ ಪರೀಕ್ಷೆ

ಪರೀಕ್ಷಾ ವಿಧಾನ:

  • ಒಟ್ಟು ಪ್ರಶ್ನೆಗಳು: 100 | ಅಂಕಗಳು: 100
  • ಸಮಯ: 2 ಗಂಟೆ
  • ವಿಷಯಗಳು: ರೀಸನಿಂಗ್, ಜನರಲ್ ನಾಲೆಡ್ಜ್, ಮ್ಯಾಥಮೆಟಿಕ್ಸ್, ಇಂಗ್ಲಿಷ್/ಹಿಂದಿ.
  • ನೆೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ.

ಸಂಬಳ ಮತ್ತು ಅರ್ಜಿ ಶುಲ್ಕ:

  • ಸಂಬಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್-3 ಅಡಿಯಲ್ಲಿ ₹21,700 ರಿಂದ ₹69,100 ವರೆಗೆ ವೇತನ ದೊರೆಯುತ್ತದೆ. ಇದರೊಂದಿಗೆ ಸರ್ಕಾರದ ಭತ್ಯೆಗಳೂ ಸಿಗಲಿವೆ.
  • ಶುಲ್ಕ: ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ₹100.
  • ಶುಲ್ಕ ವಿನಾಯಿತಿ: SC/ ST / ಮಹಿಳೆಯರು / ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ.

ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

* ಮಹಿಳೆಯರು ಅರ್ಜಿ ಸಲ್ಲಿಸಬಹುದೇ ? ಹೌದು, ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ.

* ಕೇವಲ 10ನೇ ತರಗತಿ ಓದಿದವರಿಗೆ ಹುದ್ದೆಗಳಿವೆಯೇ? ಹೌದು, ಅನೇಕ ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಆದರೆ ಸಂಬಂಧಿತ ಕೆಲಸದಲ್ಲಿ ಜ್ಞಾನವಿರಬೇಕು.

*ಅರ್ಜಿ ಸಲ್ಲಿಸುವುದು ಹೇಗೆ? ಸಿಆರ್‌ಪಿಎಫ್ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

* ಪರೀಕ್ಷೆ ಯಾವ ಭಾಷೆಯಲ್ಲಿರುತ್ತದೆ? ಕಂಪ್ಯೂಟರ್ ಆಧಾರಿತ ಪರೀಕ್ಷೆಯು (CBT) ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇರುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular