ಬೆಂಗಳೂರು: ಹಿಂದೂ ಪರ ಸಂಘಟನೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಿದ ಗಡಿಪಾರು ಆದೇಶಕ್ಕೆ ನೀಡಿದ ತಡೆಯಜ್ಞೆಯನ್ನು ಏಪ್ರಿಲ್ 16 ವರೆಗೆ ಹೈಕೋರ್ಟ್ ವಿಸ್ತರಿಸಿದೆ.
ಮೂರನೇ ಬಾರಿಗೆ ಗಡಿಪಾರು ಮಾಡಿ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಅರ್ಜಿದಾರರ ಮಾನವಿ ಪರಿಗಣಿಸಿದೆ. ಗಡಿಪಾರು ಆದೇಶವನ್ನು ಏಪ್ರಿಲ್ 16ರ ವರೆಗೆ ಜಾರಿಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕಾರಣವಿಲ್ಲದೆ ತಡೆಯಾಜ್ಞೆ ಮುಂದುವರೆಸಲಾಗದು. ಮುಂದಿನ ವಿಚಾರಣೆಯಲ್ಲಿ ವಾದ ಮಂಡಿಸುವಂತೆ ಅರ್ಜಿದಾರರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.

