ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಎರಡು ಮಾರ್ಗಗಳಲ್ಲಿ ಗುರುವಾರದಿಂದ ಬಿಎಂಟಿಸಿ ಬಸ್ ಸೇವೆ ಆರಂಭವಾಗಿದೆ.
ದೊಮ್ಮಸಂದ್ರದಿಂದ ಮುತ್ತಾನಲ್ಲೂರು ಕ್ರಾಸ್, ನಾರಾಯಣಘಟ್ಟ, ರಾಮಸಾಗರ ಮಾರ್ಗವಾಗಿ ಚಂದಾಪುರಕ್ಕೆ ಹಾಗೂ ಬಿಡದಿಯಿಂದ ಬೈರಮಂಗಲ ಕ್ರಾಸ್, ಶಾನುಮಂಗಲ, ಕೋಡಿಯಾಲ, ಕಗ್ಗಲಿಪುರ ಮಾರ್ಗವಾಗಿ ಬನ್ನೇರುಘಟ್ಟ ವೃತ್ತಕ್ಕೆ ಬಸ್ಗಳು ಸೇವೆ ನೀಡಲಿವೆ.
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಅತ್ತಿಗುಪ್ಪೆ, ವಿಜಯನಗರ, ಶ್ರೀನಿವಾಸನಗರ, ಮಾಳಗಾಳ, ಸುಮನಹಳ್ಳಿ ಜಂಕ್ಷನ್, ಕೊಟ್ಟಿಗೆ ಪಾಳ್ಯ, ಪಾಪರೆಡ್ಡಿ ಪಾಳ್ಯ, ಕೆಂಗುಂಟೆ ವೃತ್ತ, ನಾಗರಬಾವಿ ವೃತ್ತ ಮಾರ್ಗವಾಗಿ ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ ಮೆಟ್ರೋ ಫೀಡರ್ ಬಸ್ ಸೇವೆ ಆರಂಭಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

