HomeLatest Newsರೈತರಿಗೆ ಗುಡ್ ನ್ಯೂಸ್: ದಾಖಲೆಯ 20 ಸಾವಿರ ರೂ. ಗಡಿದಾಡಿದ ಒಣಕೊಬ್ಬರಿ ದರ

ರೈತರಿಗೆ ಗುಡ್ ನ್ಯೂಸ್: ದಾಖಲೆಯ 20 ಸಾವಿರ ರೂ. ಗಡಿದಾಡಿದ ಒಣಕೊಬ್ಬರಿ ದರ

ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಒಣ ಕೊಬ್ಬರಿ ದರ ಕ್ವಿಂಟಾಲ್ ಗೆ 20900 ರೂ.ಗೆ ತಲುಪಿದ್ದು ರೈತರಲ್ಲಿ ಹರ್ಷ ತಂದಿದೆ.

ಇತ್ತೀಚಿನ ವರ್ಷಗಳಲ್ಲಿ ಒಣ ಕೊಬ್ಬರಿ ದರ ಕುಸಿದು ತೆಂಗು ಬೆಳೆಗಾರರಲ್ಲಿ ಆತಂಕ ತಂದಿದ್ದು, 2024ರ ಮಧ್ಯ ಭಾಗದಿಂದ ನಿಧಾನವಾಗಿ ಬೆಲೆ ಏರಿಕೆ ಕಾಣುತ್ತಿತ್ತು. ಕಳೆದ ಗುರುವಾರ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಕ್ವಿಂಟಲ್ ಗೆ 19,566 ರೂಪಾಯಿಗೆ ತಲುಪಿದ್ದು, ಸೋಮವಾರ 20900 ರೂ.ಗೆ ಮಾರಾಟವಾಗಿದೆ.

ಬೆಳೆಗಾರರಲ್ಲಿ ಈ ದರ ಏರಿಕೆ ಸಂತಸ ತಂದಿದೆ. ಇದು ಇದುವರೆಗಿನ ದಾಖಲೆಯ ಬೆಲೆಯಾಗಿದೆ. ಏಳೆಂಟು ವರ್ಷಗಳ ಹಿಂದೆ ಕ್ವಿಂಟಾಲ್ ಕೊಬ್ಬರಿ ದರ 18 ಸಾವಿರ ರೂ. ಸಮೀಪಕ್ಕೆ ಬಂದಿತ್ತು. ನಂತರ ದರ ಹಠಾತ್ ಕುಸಿತ ಕಂಡು ಕ್ವಿಂಟಾಲ್ ಗೆ 8 ಸಾವಿರ ರೂ. ಆಸುಪಾಸಿನಲ್ಲಿತ್ತು, ಇದೀಗ 20 ಸಾವಿರ ರೂಪಾಯಿ ಗಡಿ ದಾಟಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular