ಬೆಂಗಳೂರು: ಜಾಗತಿಕ ರಾಜಕೀಯ ವಿದ್ಯಮಾನಗಳ ಎಫೆಕ್ಟ್ ನೇರವಾಗಿ ಚಿನ್ನದ ಮಾರುಕಟ್ಟೆಯ ಮೇಲೆ ಬಿದ್ದಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಕೊನೆಗಾಣುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ (Crude Oil) ಬೆಲೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಅಮೂಲ್ಯ ಲೋಹಗಳತ್ತ ಮುಖ ಮಾಡಿದ್ದು, ಇಂದು ಗುರುವಾರ (ಮೇ 21) ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆ ದಾಖಲಾಗಿದೆ
ಇಂದು ಗುರುವಾರ 24 ಕ್ಯಾರೆಟ್‌ನ ಶುದ್ಧ ಅಪರಂಜಿ ಚಿನ್ನದ ಬೆಲೆಯಲ್ಲಿ ಭಾರಿ ಜಂಪ್ ಕಂಡುಬಂದಿದೆ. 10 ಗ್ರಾಂ ಅಪರಂಜಿ ಚಿನ್ನದ ದರದಲ್ಲಿ ಬರೋಬ್ಬರಿ 490 ರೂಪಾಯಿ ಏರಿಕೆಯಾಗುವ ಮೂಲಕ ದಾಖಲೆಯ 1,59,930 ರೂಪಾಯಿ ತಲುಪಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆ ಇಂದು 49 ರೂಪಾಯಿ ಹೆಚ್ಚಳವಾಗಿ 15,993 ರೂಪಾಯಿ ದಾಖಲಾಗಿದ್ದು, 16,000 ರೂಪಾಯಿಯ ಗಡಿ ಮುಟ್ಟಲು ಕೆಲವೇ ಹೆಜ್ಜೆ ಬಾಕಿ ಇದೆ
22 ಕ್ಯಾರೆಟ್ ಮತ್ತು 18 ಕ್ಯಾರೆಟ್ ದರ
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ. ಇಂದು ಒಂದೇ ದಿನ ಗ್ರಾಮ್‌ಗೆ 145 ರೂಪಾಯಿ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲೇ ಬರೋಬ್ಬರಿ 340 ರೂಪಾಯಿಯಷ್ಟು ದರ ಹೆಚ್ಚಳವಾಗಿದೆ!
ಬೆಂಗಳೂರಿನಲ್ಲಿ 22 ಕ್ಯಾರೆಟ್ (10 ಗ್ರಾಂ): ₹1,46,600
ಬೆಂಗಳೂರಿನಲ್ಲಿ 22 ಕ್ಯಾರೆಟ್ (1 ಗ್ರಾಂ): ₹14,660
18 ಕ್ಯಾರೆಟ್ ಚಿನ್ನದ ದರ: ಗ್ರಾಮ್‌ಗೆ ಭರಸರದಿಂದ 12,000 ರೂಪಾಯಿಯ ಗಡಿಯತ್ತ ದೌಡಾಯಿಸುತ್ತಿದೆ.
ಬೆಳ್ಳಿ ದರದಲ್ಲೂ ದಿಢೀರ್ ಜಂಪ್
ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಾಣುತ್ತಿದ್ದ ಬೆಳ್ಳಿ ದರಕ್ಕೂ ಇಂದು ಚಿನ್ನದ ಏರಿಕೆಯ ಬಿಸಿ ತಟ್ಟಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಗ್ರಾಮ್‌ಗೆ 5 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ ಬೆಲೆ: ₹28,500 ಇದೆ.ಜಾಗತಿಕ ಮಾರುಕಟ್ಟೆಯಲ್ಲಿನ ಈ ದಿಢೀರ್ ಬದಲಾವಣೆಗಳು ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,59,930
ನಾಗ್ಪುರ ₹1,59,930
ಮುಂಬೈ ₹1,59,930
ಚೆನ್ನೈ ₹1,61,670
ಕೋಲ್ಕತ್ತಾ ₹1,59,930
ಪಾಟ್ನಾ ₹1,60,130
ಸೂರತ್ ₹1,60,130
ಚಂಡೀಗಢ ₹1,60,230
ಲಕ್ನೋ ₹1,60,230

