HomeBusinessಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: 10 ಗ್ರಾಂ ಬಂಗಾರಕ್ಕೆ ₹850 ಇಳಿಕೆ:ಇಂದಿನ ಮಾರುಕಟ್ಟೆ ದರ ಹೀಗಿದೆ

ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: 10 ಗ್ರಾಂ ಬಂಗಾರಕ್ಕೆ ₹850 ಇಳಿಕೆ:ಇಂದಿನ ಮಾರುಕಟ್ಟೆ ದರ ಹೀಗಿದೆ

ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಲ್ಪ ಇಳಿಕೆ ಕಾಣುವ ಮೂಲಕ ಗ್ರಾಹಕರಿಗೆ ತುಸು ನಿರಾಳತೆ ತಂದಿವೆ. ಕಳೆದ ತಿಂಗಳಿನಿಂದ ಏರುಗತಿಯಲ್ಲಿದ್ದ ಲೋಹದ ಬೆಲೆಗಳು, ಫೆಬ್ರವರಿ ಆರಂಭದಿಂದ ಇಳಿಕೆಯ ಹಾದಿ ಹಿಡಿದಿವೆ.ಭಾರತದಲ್ಲಿ ಹಳದಿ ಲೋಹದ ಬೆಲೆ ಪ್ರತಿ ಗ್ರಾಮ್‌ಗೆ 85 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಪ್ರಮುಖ ನಗರಗಳಲ್ಲಿನ ದರ ಹೀಗಿದೆ:

22 ಕ್ಯಾರಟ್ ಚಿನ್ನ (10 ಗ್ರಾಮ್): ₹1,44,750

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,57,910

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳ್ಳಿ ಬೆಲೆ ವಿವರ (Silver Rates)
ಬೆಳ್ಳಿ ಪ್ರಿಯರಿಗೆ ಸತತವಾಗಿ ಶುಭಸುದ್ದಿ ಸಿಗುತ್ತಿದ್ದು, ಇಂದು ಬೆಲೆ 10 ರೂಪಾಯಿ ತಗ್ಗಿದೆ.ಭಾರತದಲ್ಲಿ ಬೆಳ್ಳಿ ಬೆಲೆ (100 ಗ್ರಾಮ್): ₹29,000 ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ ಇಂದಿಗೂ ₹30,000 ಮಟ್ಟದಲ್ಲಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಲೆಗಳು ಸ್ಥಿರತೆಯತ್ತ ಮುಖ ಮಾಡಿದ್ದು, ರಾಜ್ಯದ ಇತರ ಭಾಗಗಳಿಗಿಂತ ತುಸು ಭಿನ್ನವಾಗಿವೆ:

ಚಿನ್ನ (10 ಗ್ರಾಮ್): ₹1,44,750

ಬೆಳ್ಳಿ (100 ಗ್ರಾಮ್): ₹29,000

ಕಳೆದ ಜನವರಿ ತಿಂಗಳಿಡೀ ಏರಿಕೆ ಕಂಡಿದ್ದ ಬೆಳ್ಳಿ ದರವು ಗ್ರಾಹಕರಿಗೆ ಶಾಕ್ ನೀಡಿತ್ತು. ಆದರೆ, ಫೆಬ್ರವರಿ ಆರಂಭದಿಂದಲೇ ಬೆಳ್ಳಿ ದರದಲ್ಲಿ ಭಾರಿ ಕುಸಿತ ಕಂಡುಬರುತ್ತಿರುವುದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಚಿನ್ನದ ಬೆಲೆ ಏರಿಳಿತ ಕಂಡರೂ, ಬೆಳ್ಳಿ ಮಾತ್ರ ಸತತವಾಗಿ ಇಳಿಕೆಯ ಹಾದಿಯಲ್ಲಿದೆ

ಇಂದಿನ ಚಿನ್ನ ಮತ್ತು ಬೆಳ್ಳಿ ದರ ಪಟ್ಟಿ

ಚಿನ್ನದ ವಿಧ ಇಂದಿನ ದರ (1 ಗ್ರಾಂ) 10 ಗ್ರಾಂ ದರ

24 ಕ್ಯಾರಟ್ (ಅಪರಂಜಿ) ₹15,791 ₹1,57,910

22 ಕ್ಯಾರಟ್ (ಆಭರಣ ಚಿನ್ನ) ₹14,475 ₹1,44,750

18 ಕ್ಯಾರಟ್ ₹11,844 ₹1,18,440

ಬೆಳ್ಳಿ ಬೆಲೆ:
1 ಗ್ರಾಂ ಬೆಳ್ಳಿ: ₹290

100 ಗ್ರಾಂ ಬೆಳ್ಳಿ: ₹29,000

1 ಕೆಜಿ ಬೆಳ್ಳಿ: ₹2,90,000

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ

(1 ಗ್ರಾಂ)ನಗರ24 ಕ್ಯಾರೆಟ್ ಇಂದಿನ ದರ (1 ಗ್ರಾಂ)

ಚೆನ್ನೈ₹15,906

ಮುಂಬೈ₹15,791

ದೆಹಲಿ₹15,806

ಕೋಲ್ಕತ್ತಾ₹15,791

ಬೆಂಗಳೂರು₹15,791

ಹೈದರಾಬಾದ್₹15,791

ಕೇರಳ₹15,791

ಪುಣೆ₹15,791

ವಡೋದರಾ₹15,796

ಅಹಮದಾಬಾದ್₹15,796

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular