ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ ಹಳದಿ ಲೋಹದ ಪ್ರಿಯರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ ಏರಿಕೆಯಾಗುತ್ತಿದ್ದ ಅಮೂಲ್ಯ ಲೋಹಗಳ ಬೆಲೆ, ಈ ಬಾರಿ ಅಚ್ಚರಿಯ ರೀತಿಯಲ್ಲಿ ಇಳಿಕೆ ಕಂಡಿದೆ. ಒಂದು ಹಂತದಲ್ಲಿ 1.50 ಲಕ್ಷ ರೂಪಾಯಿಗಳ ಗಡಿ ಮೀರಿದ್ದ ಚಿನ್ನದ ಬೆಲೆ ಈಗ ಬರೋಬ್ಬರಿ 1.28 ಲಕ್ಷ ರೂಪಾಯಿ ಆಸುಪಾಸಿಗೆ ಬಂದು ತಲುಪಿದೆ.
ಇಂದಿನ ಚಿನ್ನದ ದರ (ಮಾರ್ಚ್ 24, 2026)
ಇಂದು ಮಂಗಳವಾರ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ:
10 ಗ್ರಾಂ ಚಿನ್ನದ ಬೆಲೆ: ಇಂದು 2,940 ರೂ. ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ 1,40,350 ರೂ. ಗೆ ತಲುಪಿದೆ.
1 ಗ್ರಾಂ ಚಿನ್ನದ ಬೆಲೆ: ಇಂದು 294 ರೂ. ಕಡಿತವಾಗಿದ್ದು, 14,035 ರೂ. ದಾಖಲಾಗಿದೆ.
ಕಳೆದ 24 ದಿನಗಳ ಅವಧಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಟ್ಟು 32,740 ರೂಪಾಯಿಗಳಷ್ಟು ಬೃಹತ್ ಕಡಿತವಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ -18.91% ಇಳಿಕೆಯ ಟ್ರೆಂಡ್ ಮುಂದುವರಿದಿದೆ.
ಬೆಳ್ಳಿ ಬೆಲೆಯಲ್ಲಿ ದಿಢೀರ್ ಚೇತರಿಕೆ
ಚಿನ್ನದ ಬೆಲೆ ಕುಸಿಯುತ್ತಿದ್ದರೆ, ಬೆಳ್ಳಿ ಮಾತ್ರ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ ಒಂದೇ ದಿನ 15 ಸಾವಿರ ರೂಪಾಯಿ ಕುಸಿತ ಕಂಡಿದ್ದ ಬೆಳ್ಳಿ,ಕೆಜಿ ಬೆಳ್ಳಿ ಬೆಲೆ ಇಂದು 5,000 ರೂ. ಏರಿಕೆಯಾಗಿದ್ದು, ಪ್ರಸ್ತುತ 2,35,000 ರೂ. ತಲುಪಿದೆ.ಮಾರ್ಚ್ 2 ರಂದು ಕೆಜಿ ಬೆಳ್ಳಿಗೆ 3.15 ಲಕ್ಷ ರೂಪಾಯಿ ಗರಿಷ್ಠ ಬೆಲೆ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 80 ಸಾವಿರ ರೂಪಾಯಿಗಳಷ್ಟು ವ್ಯತ್ಯಾಸ ಕಂಡುಬಂದಿದೆ.
ಬೆಲೆ ಏರಿಳಿತಕ್ಕೆ ಕಾರಣವೇನು?
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹೊರತಾಗಿಯೂ, ಡಾಲರ್ ಮೌಲ್ಯದಲ್ಲಿನ ಏರಿಳಿತಗಳು ಈ ಅನಿರೀಕ್ಷಿತ ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಯುದ್ಧದ ಸಮಯದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ದುಕೊಳ್ಳುತ್ತಿದ್ದರೂ, ಪ್ರಸ್ತುತ ಮಾರುಕಟ್ಟೆಯ ಚಲನೆ ಆಭರಣ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಇಂದಿನ ಪ್ರಮುಖ ಭಾರತೀಯ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ ಗ್ರಾಂ):
ಚೆನ್ನೈ – ₹14,182
ಮುಂಬೈ – ₹14,035
ದೆಹಲಿ – ₹14,050
ಕೊಲ್ಕತ್ತಾ – ₹14,035
ಬೆಂಗಳೂರು – ₹14,035
ಹೈದರಾಬಾದ್ – ₹14,035
ಕೇರಳ – ₹14,035
ಪುಣೆ – ₹14,035
ವಡೋದರಾ – ₹14,040
ಅಹಮದಾಬಾದ್ – ₹14,040

