HomeBusinessಚಿನ್ನಅಡವಿಟ್ಟು ಲೋನ್ ಪಡೆಯುವ ಮುನ್ನ ಗೋಲ್ಡ್ ಓವರ್‌ಡ್ರಾಫ್ಟ್ ಬಗ್ಗೆ ತಿಳಿಯಿರಿ: ನಿಮ್ಮ ಸಾವಿರಾರು ರೂಪಾಯಿ ಬಡ್ಡಿ...

ಚಿನ್ನಅಡವಿಟ್ಟು ಲೋನ್ ಪಡೆಯುವ ಮುನ್ನ ಗೋಲ್ಡ್ ಓವರ್‌ಡ್ರಾಫ್ಟ್ ಬಗ್ಗೆ ತಿಳಿಯಿರಿ: ನಿಮ್ಮ ಸಾವಿರಾರು ರೂಪಾಯಿ ಬಡ್ಡಿ ಉಳಿಸಬಹುದು

ಬೆಂಗಳೂರು: ಸಾಮಾನ್ಯವಾಗಿ ತುರ್ತು ಹಣದ ಅವಶ್ಯಕತೆ ಬಂದಾಗ ನಮಗೆ ತಕ್ಷಣ ನೆನಪಾಗುವುದು ಗೋಲ್ಡ್ ಲೋನ್ (Gold Loan). ಆದರೆ, ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇದಕ್ಕಿಂತಲೂ ಲಾಭದಾಯಕವಾದ ಗೋಲ್ಡ್ ಓವರ್‌ಡ್ರಾಫ್ಟ್ (Gold OD) ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ. ಈ ಸೌಲಭ್ಯವು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ ಬಡ್ಡಿಯ ಹಣವನ್ನೂ ಉಳಿಸುತ್ತದೆ.ಈ ಗೋಲ್ಡ್ ಓವರ್‌ಡ್ರಾಫ್ಟ್ ಅಂದರೇನು? ಸಾಮಾನ್ಯ ಗೋಲ್ಡ್ ಲೋನ್‌ಗಿಂತ ಇದು ಹೇಗೆ ಭಿನ್ನ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಏನಿದು ಗೋಲ್ಡ್ ಓವರ್‌ಡ್ರಾಫ್ಟ್ (Gold OD)?

ಸರಳವಾಗಿ ಹೇಳಬೇಕೆಂದರೆ, ಇದು ಕ್ರೆಡಿಟ್ ಕಾರ್ಡ್‌ನಂತೆಯೇ ಕೆಲಸ ಮಾಡುತ್ತದೆ. ನೀವು ಬ್ಯಾಂಕ್‌ನಲ್ಲಿ ನಿಮ್ಮ ಚಿನ್ನವನ್ನು ಅಡವಿಟ್ಟಾಗ ಬ್ಯಾಂಕ್ ನಿಮಗೆ ಒಂದು ನಿರ್ದಿಷ್ಟ ಮೊತ್ತದ ಸಾಲದ ಮಿತಿಯನ್ನು (Credit Limit) ಮಂಜೂರು ಮಾಡುತ್ತದೆ.

ಉದಾಹರಣೆಗೆ, ಬ್ಯಾಂಕ್ ನಿಮಗೆ 10 ಲಕ್ಷ ರೂಪಾಯಿ ಮಿತಿ ನೀಡಿದೆ ಎಂದು ಭಾವಿಸೋಣ. ಈ 10 ಲಕ್ಷದಲ್ಲಿ ನಿಮಗೆ ತಕ್ಷಣಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿದರೆ ಸಾಕು. ಉಳಿದ ಹಣ ಬ್ಯಾಂಕ್ ಖಾತೆಯಲ್ಲಿಯೇ ಇರುತ್ತದೆ ಮತ್ತು ಅದಕ್ಕೆ ಯಾವುದೇ ಬಡ್ಡಿ ಅನ್ವಯಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋಲ್ಡ್ ಲೋನ್ ಮತ್ತು ಓವರ್‌ಡ್ರಾಫ್ಟ್ ನಡುವಿನ ವ್ಯತ್ಯಾಸ

ಗೋಲ್ಡ್ ಲೋನ್: ಇಲ್ಲಿ ನೀವು ಮಂಜೂರಾದ ಪೂರ್ತಿ ಹಣವನ್ನು ಒಮ್ಮೆಗೇ ಪಡೆಯುತ್ತೀರಿ. ನೀವು ಆ ಹಣವನ್ನು ಬಳಸಲಿ ಅಥವಾ ಬಿಡಲಿ, ಮೊದಲ ದಿನದಿಂದಲೇ ಪೂರ್ಣ ಮೊತ್ತಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ. ಇದು ಒಂದು ಬಾರಿ ದೊಡ್ಡ ಮೊತ್ತದ ಅವಶ್ಯಕತೆ ಇರುವವರಿಗೆ ಸೂಕ್ತ.

ಗೋಲ್ಡ್ ಓವರ್‌ಡ್ರಾಫ್ಟ್: ಇಲ್ಲಿ ಹಣವನ್ನು ಕಂತುಗಳಲ್ಲಿ ಅಥವಾ ನಿಮಗೆ ಬೇಕಾದಾಗ ಡ್ರಾ ಮಾಡಿಕೊಳ್ಳಬಹುದು. ಉದಾಹರಣೆಗೆ, ಈ ತಿಂಗಳು 2 ಲಕ್ಷ ಬಳಸಿದರೆ, ಆ 2 ಲಕ್ಷಕ್ಕೆ ಮಾತ್ರ ಬಡ್ಡಿ ಇರುತ್ತದೆ. ಮುಂದಿನ ತಿಂಗಳು ಮತ್ತೆ 1 ಲಕ್ಷ ಬಳಸಿದರೆ ಆಗ ಒಟ್ಟು 3 ಲಕ್ಷಕ್ಕೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ.

ಇದರ ಪ್ರಮುಖ ಲಾಭಗಳೇನು?

ಬಡ್ಡಿ ಉಳಿತಾಯ: ಪೂರ್ಣ ಸಾಲದ ಮೊತ್ತದ ಬದಲಿಗೆ, ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಇರುವುದರಿಂದ ಇದು ಆರ್ಥಿಕವಾಗಿ ಲಾಭದಾಯಕ.

ಚಿನ್ನದ ಸುರಕ್ಷತೆ: ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವ ಬದಲು ಬ್ಯಾಂಕ್‌ನಲ್ಲಿ ಅಡವಿಟ್ಟರೆ ಅದು ಹೆಚ್ಚು ಸುರಕ್ಷಿತ. ಜೊತೆಗೆ ಬ್ಯಾಂಕ್ ಲಾಕರ್ ಬಾಡಿಗೆ ಅಥವಾ ವಿಮೆ ವೆಚ್ಚವೂ ಇರುವುದಿಲ್ಲ.

ಅನಿಶ್ಚಿತ ವೆಚ್ಚಗಳಿಗೆ ಬೆಸ್ಟ್: ಮನೆ ಕಟ್ಟಿಸುವವರಿಗೆ ಅಥವಾ ವ್ಯಾಪಾರಸ್ಥರಿಗೆ ಹಂತ ಹಂತವಾಗಿ ಹಣದ ಅವಶ್ಯಕತೆ ಇರುತ್ತದೆ. ಅಂತಹವರಿಗೆ ಈ ಸೌಲಭ್ಯ ವರದಾನ.

ಚಿನ್ನದ ಬೆಲೆ ಏರಿಕೆ ಲಾಭ: ನಿಮ್ಮ ಚಿನ್ನ ಬ್ಯಾಂಕ್‌ನಲ್ಲಿದ್ದರೂ, ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚಾದಂತೆ ಆ ಆಸ್ತಿಯ ಮೌಲ್ಯ ನಿಮಗೇ ಸೇರುತ್ತದೆ.

ಅರ್ಹತೆ ಮತ್ತು ಮಿತಿ:
ವಯಸ್ಸು: 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಈ ಸೌಲಭ್ಯ ಪಡೆಯಬಹುದು.

ದಾಖಲೆಗಳು: ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಅಡ್ರೆಸ್ ಪ್ರೂಫ್ ಅಗತ್ಯ.

ಸಾಲದ ಮಿತಿ: ಸಾಮಾನ್ಯವಾಗಿ ಚಿನ್ನದ ಮೌಲ್ಯದ ಶೇ. 75 ರಷ್ಟು ಮೊತ್ತವನ್ನು ಓವರ್‌ಡ್ರಾಫ್ಟ್ ಮಿತಿಯಾಗಿ ನೀಡಲಾಗುತ್ತದೆ.

ಗಮನಿಸಬೇಕಾದ ಅಂಶಗಳು:

ಗೋಲ್ಡ್ ಓವರ್‌ಡ್ರಾಫ್ಟ್‌ಗೆ ಮೌಲ್ಯಮಾಪನ ಶುಲ್ಕ (Valuation fees) ಮತ್ತು ಪ್ರೊಸೆಸಿಂಗ್ ಫೀಸ್ ಇರುತ್ತದೆ. ಅಲ್ಲದೆ ಇದರ ಅವಧಿಯು ಗೋಲ್ಡ್ ಲೋನ್‌ಗಿಂತ ಕಡಿಮೆ ಇದ್ದು ಕಾಲಕಾಲಕ್ಕೆ ನವೀಕರಣ (Renewal) ಮಾಡಿಸಬೇಕಾಗುತ್ತದೆ.

ನಿಮಗೆ ಒಂದೇ ಬಾರಿ ದೊಡ್ಡ ಮೊತ್ತದ ಹಣದ ಅಗತ್ಯವಿದ್ದರೆ ಗೋಲ್ಡ್ ಲೋನ್ ಮಾಡಿ. ಆದರೆ, ಆಗಾಗ ಹಣದ ಅವಶ್ಯಕತೆ ಬರುತ್ತದೆ ಎಂದಾದರೆ ಗೋಲ್ಡ್ ಓವರ್‌ಡ್ರಾಫ್ಟ್ ಆಯ್ಕೆ ಮಾಡಿಕೊಳ್ಳುವುದು ಜಾಣತನ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular