HomeLatest NewsSHOCKING: ಮಕ್ಕಳ ಕಳ್ಳಿಯರೆಂದು ತಪ್ಪಾಗಿ ಭಾವಿಸಿ ಮಹಿಳೆಯರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

SHOCKING: ಮಕ್ಕಳ ಕಳ್ಳಿಯರೆಂದು ತಪ್ಪಾಗಿ ಭಾವಿಸಿ ಮಹಿಳೆಯರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಗದಗ: ಮಕ್ಕಳ ಕಳ್ಳಿಯರೆಂದು ತಪ್ಪಾಗಿ ಭಾವಿಸಿ ಏಳು ಮಹಿಳೆಯರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ಗ್ರಾಮದ ಢೋಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರಿಗೆ ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಏಳು ಮಹಿಳೆಯರು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮೂಲದವರಾಗಿದ್ದು ಹೇರ್ ಪಿನ್ ಸೇರಿದಂತೆ ಕೆಲ ದಿನಬಳಕೆ ವಸ್ತುಗಳನ್ನು ಮಾರುತ್ತಾ ಬಂದಿದ್ದರು. ಅವರನ್ನು ಮಕ್ಕಳ ಕಳ್ಳಿಯರೆಂದು ಗ್ರಾಮಸ್ಥರು ಆರೋಪಿಸಿದ್ದು, ಅಪರಿಚಿತ ಮಹಿಳೆಯರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ವಿಚಾರಿಸಿದಾಗ ಅವರು ಮಕ್ಕಳ ಕಳ್ಳಿಯರಲ್ಲ, ಊರುಂದ ಊರಿಗೆ ತಿರುಗಿ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುವವರೆಂದು ತಿಳಿದಿಬಂದ್ದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular