ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಪಿಗೆಹಳ್ಲಿಯ ಅಗ್ರಹಾರ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಆಯೇಷಾ ಸಿದ್ದಕಿ ಕೊಎಯಾದ ಮಹಿಳೆ. ಸೈಯದ್ ಜಬಿ ಪತ್ನಿಯನ್ನೇ ಕೊಂದ ಪತಿ. ಆಯೇಷಾ ಈ ಹಿಂದೆ ಒಂದು ಮದುವೆಯಾಗಿ ಮೊದಲ ಪತಿಯಿಂದ ದೂರಾಗಿ ವಿಚ್ಛೇದನ ಪಡೆದಿದ್ದಳು. ಬಳಿಕ ಮೂರು ತಿಂಗಳ ಹಿಂದೆ ಸೈಯದ್ ಜೊತೆ ವಿವಾಹವಾಗಿದ್ದಳು.
ಆಯೇಷಾ ಬ್ಯೂಟಿ ಪಾರ್ಕರ್ ಹಾಗೂ ಮಸಾಜ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಬಿಡುವಂತೆ ಸೈಯದ್ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಕೋಪದ ಬರದಲ್ಲಿ ಪತ್ನಿಯನ್ನೇ ಕೊಲೆಗೈದಿದ್ದಾನೆ.
ಬಳಿಕ ಯಲಹಂಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

