ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ಆಮಿಷವೊಡ್ಡುವ ವಂಚಕರ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಸರ್ಕಾರಿ, ಮ್ಯಾನೇಜ್ಮೆಂಟ್, ಎನ್.ಆರ್.ಐ. ಸೇರಿದಂತೆ ಎಲ್ಲಾ ರೀತಿಯ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕವೇ ಹಂಚಿಕೆ ಮಾಡಲಾಗುವುದು. ಹಾಗಾಗಿ ಸೀಟು ಕೊಡಿಸುವುದಾಗಿ ಬರುವ ಯಾವುದೇ ವಂಚಕರ ಆಮಿಷಗಳಿಗೆ ವಿದ್ಯಾರ್ಥಿಗಳು, ಪೋಷಕರು ಒಳಗಾಗದಂತೆ ತಿಳಿಸಿದ್ದಾರೆ.
ಕೆಲವರು ಸರ್ಕಾರಿ ಕೋಟಾ ಸೀಟು ಹೊರತುಪಡಿಸಿ ಇತರೆ ಸೀಟುಗಳನ್ನು ಕೊಡಿಸುವುದಾಗಿ ನಂಬಿಸುವ ಪ್ರಯತ್ನಗಳ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು. ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಗೆ ಮ್ಯಾನೇಜ್ಮೆಂಟ್ ಮತ್ತು ಎನ್.ಆರ್.ಐ. ಸೀಟುಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಇದೆ. ಆದರೆ, ಸೀಟು ಹಂಚಿಕೆಗೆ ಅದಕ್ಕೆ ಅವಕಾಶವಿಲ್ಲ. ಸೀಟು ಹಂಚಿಕೆ ಕರ್ನಾಟಕ ಪ್ರತಿಕ್ಷ ಪ್ರಾಧಿಕಾರದ ಮೂಲಕವೇ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

