ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಪ್ರೋಟೀನ್ ಗೂ ನರರೋಗಕ್ಕೂ ಸಂಬಂಧವಿದೆ. ಗ್ಲುಟೆನ್ ರಹಿತ ಆಹಾರ ಸೇವನೆಯ ಡಯಟ್ ಮಾಡಿದಲ್ಲಿ ನರರೋಗ ಬರುವ ಸಾಧ್ಯತೆ ಕಡಿಮೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಆದರೆ ಈ ಸಂಭಂದಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ.
ನರರೋಗದಿಂದ ಕೈ, ಪಾದಗಳಲ್ಲಿ ನೋವು, ನಿಶ್ಯಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತವೆ. ಈ ಸಿಂಪಲ್ ಡಯಟ್ ನಿಂದ ನರರೋಗದಿಂದ ಉಂಟಾಗಬಹುದಾದ ನೋವನ್ನು ಕಡಿಮೆ ಮಾಡಬಹುದು ಎನ್ನುತ್ತೆ ಸಂಶೋಧನೆ.