HomeLatest NewsSHOCKING: ಸಹೋದರ ಬುದ್ಧಿವಾದ ಹೇಳಿದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

SHOCKING: ಸಹೋದರ ಬುದ್ಧಿವಾದ ಹೇಳಿದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಗದಗ: ಚನ್ನಾಗಿ ಓದು ಎಕ್ಸಾಂ ಸಮೀಪಿಸುತ್ತಿದೆ. ಅನಗತ್ಯವಾಗಿ ಸುತ್ತಾಡುತ್ತಾ ಇರಬೇಡ ಎಂದು ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಚಂದ್ರಿಕಾ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಾಗಲಕೋಟೆಯ ಶಿರೂರು ಗ್ರಾಮದ ಚಂದ್ರಿಕಾ, ಗದಗ ನಗರದ ಸಂಭಾಪೂರ ರಸ್ತೆಯ ಲಕ್ಷ್ಮೀ ನಗರದಲ್ಲಿ ಬಾಡಿಗೆ ಮನೆಯಲ್ಲಿ ಸ್ನೇಹಿತೆಯರ ಜೊತೆ ವಾಸವಾಗಿದ್ದಳು. ಸ್ನೇಹಿತೆಯರೊಂದಿಗೆ ಟ್ರಿಪ್ ಗೆ ಹೋಗಿದ್ದಳು. ಈ ವಿಷಯ ಆಕೆಯ ಮನೆಯವರಿಗೆ ಗೊತ್ತಾಗಿದೆ. ಓದುವುದು ಬಿಟ್ಟು ಟೂರು, ಟ್ರಿಪ್ ಎಂದು ಅಲೆದಾಡುತ್ತಿದ್ದೀಯಾ ಎಂದು ಅಣ್ಣ ಬೈದಿದ್ದಾನೆ.

ಉತ್ತಮ ಅಂಕಗಳನ್ನು ಪಡೆಯುತ್ತಿರುವ ನೀನು ಇನ್ನಾರು ತಿಂಗಳು ಕಷ್ಟಪಟ್ಟು ಓದಿದರೆ ಇಂಜಿನಿಯರಿಂಗ್ ಮುಗಿಯುತ್ತದೆ. ಪದವಿ ಸಿಗುತ್ತದೆ. ಪರೀಕ್ಷೆ ಸಮೀಪಿಸುತ್ತಿದೆ. ಚನ್ನಾಗಿ ಓದು ಎಂದು ಸಹೋದರ ಚಂದ್ರಿಕಾಗೆ ಬುದ್ಧಿ ಹೇಳಿದ್ದನಂತೆ ಇದರಿಂದ ಮನನೊಂದ ಚಂದ್ರಿಕಾ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶನಿವಾರ ಮಧ್ಯರಾತ್ರಿ ಮನೆಯಿಂದ ಇದ್ದಕ್ಕಿದ್ದಂತೆ ಹೊರಗೆ ಹೋದ ಚಂದ್ರಿಕಾ ಇಂದು ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಗದಗ ಶಹರ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂಗಿಯ ಸಾವಿನ ಸುದ್ದಿ ಕೇಳಿ ಅಣ್ಣ, ತಾನು ಬುದ್ಧಿವಾದ ಹೇಳಿದೇ ತಪ್ಪಾಯಿತು ಎಂದು ಕಣ್ಣೀರಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular