HomeLatest NewsBREAKING: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: ಯುವತಿ ಆತ್ಮಹತ್ಯೆ: ಪ್ರಿಯಕರ ಹಾಗೂ ಆತನ ತಾಯಿ ವಿರುದ್ಧ...

BREAKING: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: ಯುವತಿ ಆತ್ಮಹತ್ಯೆ: ಪ್ರಿಯಕರ ಹಾಗೂ ಆತನ ತಾಯಿ ವಿರುದ್ಧ FIR ದಾಖಲು

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರನಿಂದ ಲೈಂಗಿಕ ಕಿರುಕುಳ, ಹಿಂಸೆಗೆ ನೊಂದು ಯುವತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕ ಹಾಗೂ ಆತನ ತಾಯಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ನಿವಾಸದಲ್ಲಿ ಹಾಸನ ಮೂಲದ ಇಂಜಿನಿಯರಿಂಗ್ ಪದವೀಧರೆ ಅಚಲಾ (22) ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ಅಚಲಾ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿಕರು ಎಂದು ತಿಳಿದುಬಂದಿದೆ.

ಮದುವೆಯಾಗುವುದಾಗಿ ನಂಬಿಸಿ ಅಚಲಾ ಮನೆಯವರನ್ನು ಒಪ್ಪಿಸಿದ್ದ ಆರೋಪಿ ಯುವಕ ಮಯಾಂಕ್, ಅಚಲಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಬಳಿಕ ಹಲವು ಯುವತಿಯರೊಂದಿಗೆ ಒಡನಾಟ, ದುಶ್ಚಟಗಳನ್ನು ಹೊಂದಿರುವುದು ಅಚಲಾಗೆ ಗೊತ್ತಾಗುತ್ತಿದ್ದಂತೆ ವಿಷಯ ಮನೆಯಲ್ಲಿ ಹೇಳಿದ್ದಳು. ಅಲ್ಲದೇ ಮಯಾಂಕ್ ಅಚಲಾಗೆ ಪದೇ ಪದೇ ಕಿರುಕುಳ ಹಿಂಸೆ ನೀಡುತ್ತಿದ್ದ. ಅವಾಚ್ಯವಾಗಿ ನಿಂದಿಸುವುದು, ಬಾಯಿಗೆ ಬಂದಂತೆ ಮಾತನಾಡಿ ಅವಮಾನಿಸುವುದು ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಅಚಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಚಲಾ ಆತ್ಮಹತ್ಯೆ ಬೆನ್ನಲ್ಲೇ ಆಕೆಯ ತಂದೆ ಹರ್ಷಾ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಮಯಾಂಕ್ ಹಾಗೂ ಆತನ ತಾಯಿ ವಿರುದ್ಧ ದೂರು ನೀಡಿದ್ದಾರೆ. ಮಗಳಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯವಾಗಿ ನಿಂದಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಮಗಳು ಸಾವಿಗೆ ಶರಣಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular