alex Certify ತಾಂತ್ರಿಕ ದೋಷದಿಂದಾಗಿ NSE ಸ್ಥಗಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂತ್ರಿಕ ದೋಷದಿಂದಾಗಿ NSE ಸ್ಥಗಿತ….!

ಸ್ಟಾಪ್​ ನಿಫ್ಟಿ ಹಾಗೂ ಬ್ಯಾಂಕ್​ ನಿಫ್ಟಿ ಸೂಚ್ಯಂಕದ ನವೀಕೃತ ಬೆಲೆಯನ್ನ ತೋರಿಸೋದನ್ನ ನಿಲ್ಲಿಸಿದ್ದರಿಂದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ಷೇರು ಸೂಚ್ಯಂಕದ ವಹಿವಾಟನ್ನ ಸ್ಥಗಿತಗೊಳಿಸಲಾಗಿತ್ತು.

ಎನ್​ಎಸ್​ಇ ಎರಡು ಸೇವಾ ಪೂರೈಕೆದಾರರ ಜೊತೆ ಟೆಲಿಕಾಂ ಸಂಪರ್ಕವನ್ನ ಹೊಂದಿದೆ. ಈ ಎರಡು ಲಿಂಕ್​​ಗಳಲ್ಲಿ ಸಮಸ್ಯೆ ಉಂಟಾದ ಕಾರಣ ಎನ್​ಎಸ್​ಇ ವಹಿವಾಟನ್ನ ಸ್ಥಗಿತಗೊಳಿಸಲಾಗಿದೆ ಎಂದು ಎನ್​ಎಸ್​ಇ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

ನಾವು ಸಾಧ್ಯವಾದಷ್ಟು ಬೇಗ ಈ ವ್ಯವಸ್ಥೆಯನ್ನ ಮರುಸ್ಥಾಪಿಸುವ ಕೆಲಸವನ್ನ ಮಾಡುತ್ತಿದ್ದೇವೆ. 11.40ರವರೆಗೆ ಎಲ್ಲಾ ವಿಭಾಗದ ವಹಿವಾಟುಗಳನ್ನ ಮುಚ್ಚಲಾಗಿದೆ ಹಾಗೂ ಈ ಸಮಸ್ಯೆ ಪರಿಹಾರವಾಗುತ್ತಿದ್ದಂತೆಯೇ ವಹಿವಾಟು ಮತ್ತೆ ಆರಂಭಗೊಳ್ಳಲಿದೆ ಎಂದು ಎನ್​ಎಸ್​ಇ ಮಾಹಿತಿ ನೀಡಿತ್ತು. ಇದೀಗ ಸಮಸ್ಯೆ ಸರಿಯಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...