ಆನ್ ಲೈನ್ ಕಿರಾಣಿ ಮಾರಾಟ ಕಂಪನಿ ಬಿಗ್ ಬಾಸ್ಕೆಟ್ ಲಾಕ್ ಡೌನ್ ಘೊಷಣೆಯಾದ ಎರಡೇ ದಿನಕ್ಕೆ ತನ್ನ ಶೇ.80 ರಷ್ಟು ಉದ್ಯೊಗಿಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಕಂಪನಿ ಸಿಇಒ ಹರಿ ಮೆನನ್ ಹೇಳಿದ್ದಾರೆ.
ಇಶಾ ಇನ್ಸೈಟ್ ಅವರ “ದ ಡಿಎನ್ಎಸ್ ಸಕ್ಸಸ್” ಎಂಬ ನಾಯಕತ್ವ ಕುರಿತ ಮೂರು ದಿನದ ಆನ್ ಲೈನ್ ಕಾರ್ಯಕ್ರಮವೊಂದರಲ್ಲಿ ಅವರು ಕಂಪನಿ ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬಂದಿದ್ದು ಹೇಗೆ ಎಂದು ವಿವರಿಸಿದ್ದಾರೆ.
ಬಳಿಕ 16 ದಿನದಲ್ಲಿ 12,300 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಅವರಿಗೆ ಉತ್ತಮ ತರಬೇತಿ ನೀಡಲಾಯಿತು. ಹೊಸತನವನ್ನು ಅನ್ವೇಷಿಸಿ ಅಳವಡಿಸಲಾಯಿತು. ಜನರನ್ನು ನಿಭಾಯಿಸುವುದು ದೊಡ್ಡ ಕೆಲಸ. ಕೊನೆಗೂ ನಾವು ಸಂಕಷ್ಟದಿಂದ ಪಾರೆದೆವು ಎಂದರು.